ಇಸ್ರೇಲ್:
ವಿಶೇಷ ಸ್ಫೋಟಕಗಳಿಂದ ಸಜ್ಜಿತವಾದ ಡಾಲ್ಫಿನ್ ಒಂದರಿಂದ ತನ್ನ ನೌಕಾಪಡೆಯ ಕಮಾಂಡೋಗಳ ಮೇಲೆ ಇಸ್ರೇಲ್ ದಾಳಿ ಮಾಡಿಸಿದೆ ಎಂದು ಹಮಾಸ್ ಆಪಾದನೆ ಮಾಡಿದೆ.
ಅಲ್-ಕುದ್ಸ್ ಮಾಧ್ಯಮದ ವರದಿ ಪ್ರಕಾರ, ಗಾಜ಼ಾ ಪಟ್ಟಿಯ ತೀರದಲ್ಲಿರುವ ಹಮಾಸ್‌ನ ಕಮಾಂಡೋಗಳನ್ನು ಹಿಮ್ಮೆಟ್ಟಿಸಲು ಡಾಲ್ಫಿನ್ ಒಂದನ್ನು ಇಸ್ರೇಲೀ ಭದ್ರತಾ ಪಡೆಗಳು ತರಬೇತುಗೊಳಿಸಿದೆಯಂತೆ.
ಅಲ್-ಕಸ್ಸಾಂ ಬ್ರಿಗೇಡ್‌ನ ನೌಕಾ ಕಮಾಂಡೋ ವಕ್ತಾರರೊಬ್ಬರು ವಿಡಿಯೋವೊಂದರಲ್ಲಿ ತಿಳಿಸುವ ಪ್ರಕಾರ, ವಿಶೇಷ ಗ್ಯಾಜೆಟ್ ಸಜ್ಜಿತ ಡಾಲ್ಫಿನ್ ಒಂದು ನೌಕಾ ತನ್ನ ಪಡೆಯ ಸಿಬ್ಬಂದಿಯನ್ನು ನೀರಿನತ್ತ ಸೆಳೆದು ಅವರನ್ನು ಕೊಂದಿರುವುದಾಗಿ ತಿಳಿಸಿದ್ದಾರೆ.
“ಕೊಲೆಗಾರ ಜ಼ಯಾನಿಸ್ಟ್ ಡಾಲ್ಫಿನ್‌ಗಳು ಅಸ್ತಿತ್ವದಲ್ಲಿವೆ ಎಂದು ಹಮಾಸ್ ಪ್ರಕಟಣೆಯೊಂದು ತಿಳಿಸಿದೆ. ಹಮಾಸ್‌ನ ಫ್ರಾಗ್‌ಮನ್ ಘಟಕದ ಕಮಾಂಡೋ ಒಬ್ಬರನ್ನು ಕಳೆದ ಮೇ ತಿಂಗಳಲ್ಲಿ ಇಸ್ರೇಲ್ ಕೊಂದಿದ್ದು, ಆ ವೇಳೆ ಆತನಿಗೆ ಡಾಲ್ಫಿನ್ ಕಣ್ಣಿಗೆ ಬಿದ್ದಿದೆ ಎಂದು ಅಬು ಹಮ್ಜಾ ವಿವರಿಸಿದ್ದಾರೆ.
ಈ ಕಿಲ್ಲರ್ ಡಾಲ್ಫಿನ್ ಆ ವೇಳೆ ಧರಿಸಿದ್ದ ಡಿವೈಸ್ ಅನ್ನು ಪ್ರಕಟಣೆಯಲ್ಲಿ ತೋರಲಾಗಿದೆ,” ಎಂದು ಭೌಗೋಳಿಕ ರಾಜಕೀಯದಲ್ಲಿ ಸಂಶೋಧಕರಾಗಿರುವ ಜೋ ಟ್ರೂಜ಼್‌ಮನ್ ಟ್ವೀಟ್ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
