ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಇಸ್ರೇಲ್ ದಾಳಿ…!

ಜೆರುಸಲೆಂ

   ಹಮಾಸ್ ಉಗ್ರರಿಗೆ ಬೆಂಬಲಿಸುವ ಹಿಜ್ಬುಲ್ಲಾ ಉಗ್ರರು ಹಾಗೂ ಇಸ್ರೇಲ್ ಸಮರ ತೀವ್ರಗೊಂಡಿದ್ದು, ಶುಕ್ರವಾರ ಸಂಜೆ ಲೆಬನಾನ್ ರಾಜಧಾನಿ ಬೈರೂತ್ ನಲ್ಲಿ ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಇಸ್ರೇಲ್ ಭಾರೀ ವಾಯುದಾಳಿ ನಡೆಸಿದೆ.ದಾಳಿಯಲ್ಲಿ ಹಿಜ್ಬುಲ್ಲಾದ ಕ್ಷಿಪಣಿ ಘಟಕದ ಕಮಾಂಡರ್ ಮೊಹಮ್ಮದ್ ಅಲಿ ಇಸ್ಮಾಯಿಲ್ ಮತ್ತು ಉಪ ಕಮಾಂಡರ್ ಹುಸೇನ್ ಅಹ್ಮದ್ ಇಸ್ಮಾಯಿಲ್ ಸಾವಿಗೀಡಾಗಿದ್ದಾರೆಂದು ತಿಳಿದುಬಂದಿದೆ.

   ಅಲಿ ಇಸ್ಮಾಯಿಲ್ ಇಸ್ರೇಲ್ ವಿರುದ್ಧ ಹಲವಾರು ಭಯೋತ್ಪಾದಕ ದಾಳಿಗಳ ಹೊಣೆಗಾರನಾದಿಜ್ಜು. ಬುಧವಾರ ನಡೆದ ಕ್ಷಿಪಣಿ ದಾಳಿ ಸೇರಿದಂತೆ ಇಸ್ರೇಲ್ ಮೇಲೆ ನಡೆದ ಹಲವು ರಾಕೆಟ್‌ ದಾಳಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ. ಹೀಗಾಗಿ ಹಿಬ್ಜುಲ್ಲಾದ ಕ್ಷಿಪಣಿಗಳು ಮತ್ತು ರಾಕೆಟ್ಸ್ ಫೋರ್ಸ್ನ ಮುಖ್ಯಸ್ಥ ಮತ್ತು ಈ ಘಟಕದ ಇತರ ಹಿರಿಯ ಕಮಾಂಡರ್ಗಳನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿದೆ.

  ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಈ ದಾಳಿಯ ಪ್ರಮುಖ ಗುರಿಯಾಗಿದ್ದು. ಆತನ ಸ್ಥಿತಿ ಬಗ್ಗೆ ಇನ್ನೂ ಯಾವುದೇ ಮಾಹಿತಿಗಳು ಬಂದಿಲ್ಲ. ಆದರೆ, ದಾಳಿಯಲ್ಲಿ ಹಲವರು ಸಾವನ್ನಪ್ಪಿ, 76 ಮಂದಿಗೆ ಗಾಯವಾಗಿದೆ ಎಂದು ವರದಿಗಳಿ ತಿಳಿಸಿವೆ. ಇನ್ನು ಇಸ್ರೇಲ್-ಹಮಾಸ್ ಯುದ್ಧಕ್ಕೆ ಹಿಜ್ಬುಲ್ಲಾ ಉಗ್ರರು ಪ್ರವೇಶಿಸಿ ಕಾವಿ ಹೆಚ್ಚಿಸಿರುವ ಹೊತ್ತಿನಲ್ಲೇ ಯೆಮೆನ್’ನ ಹೌತಿ ಉಗ್ರರು ಕೂಡಾ ಕದನ ಪ್ರವೇಶ ಮಾಡಿದ್ದಾರೆ.

   ಇಸ್ರೇಲ್ ದಾಳಿಗೆ ಗುರುವಾರ ಹಿಜ್ಬುಲ್ಲಾ ಉಗ್ರರ ಮೊಹಮ್ಮದ್ ಸ್ರುರ್ ಹತವಾಗಿದ್ದ. ಇದಕ್ಕೆ ಪ್ರತಿಯಾಗಿ ಹೌತಿ ಉಗ್ರರು ಗುರುವಾರ ರಾತ್ರಿ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಆದರೆ, ಈ ಕ್ಷಿಪಣಿಯನ್ನು ಗಡಿಯಿಂದ ಹೊರಗೇ ನಮ್ಮ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಇಸ್ರೇಲ್ ಹೇಳಿದೆ.ಇದು ಯುದ್ಧವನ್ನು ಭೀಕರಗೊಳಿಸುವ ಆತಂಕ ಹುಟ್ಟುಹಾಕಿದೆ. ಹೌತಿ ಉಗ್ರರನ್ನು ಸ್ರುರ್ ಬೆಂಬಲಿಸುತ್ತಿದ್ದ. ಆತನನ್ನು ಇಸ್ರೇಲ್ ಹತ್ಯೆ ಮಾಡಿರುವ ಕಾರಣ ಹೌತಿ ಉಗ್ರರು ಕೂಡ ಸಿಟ್ಟಿಗೆದ್ದಿದ್ದಾರೆ.

Recent Articles

spot_img

Related Stories

Share via
Copy link