ಜೆರುಸಲೇಂ:
ಗಾಜಾದ ಮೇಲೆ ಇಸ್ರೇಲ್ ದಾಳಿಯನ್ನು ತೀವ್ರಗೊಳಿಸಿದ್ದು ಇದರ ನಡುವೆ ಗಾಜಾಪಟ್ಟಿ ಮೇಲೆ ಅಣ್ವಸ್ತ್ರ ದಾಳಿ ಹೇಳಿಕೆ ಕೊಟ್ಟಿದ್ದ ಸಚಿವನನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮಾನತುಗೊಳಿಸಿದೆ.
ಸಂದರ್ಶನವೊಂದರಲ್ಲಿ ಗಾಜಾ ಮೇಲೆ ಪರಮಾಣು ಬಾಂಬ್ ದಾಳಿ ಮಾಡುವಂತೆ ಸಲಹೆ ನೀಡಿದ್ದ ಇಸ್ರೇಲಿ ಸಚಿವರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ ತಿಳಿಸಿದೆ.
ಉಗ್ರಗಾಮಿ ದೃಷ್ಟಿಕೋನದಿಂದ ದೂರವಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಇಸ್ರೇಲ್ ಮತ್ತು ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಅಮಾಯಕ ಜನರಿಗೆ ಹಾನಿಯಾಗದಂತೆ ಅಂತಾರಾಷ್ಟ್ರೀಯ ಕಾನೂನಿನ ಅತ್ಯುನ್ನತ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.