ಜೆರುಸಲೇಂ
ಪ್ಯಾಲೆಸ್ತೇನ್‌ನ ಗಾಜಾ ಪಟ್ಟಿ ಕಡೆಯಿಂದ ಭೀಕರ ರಾಕೆಟ್ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಯುದ್ಧವನ್ನು ಘೋಷಣೆ ಮಾಡಿದೆ. ಗಾಜಾ ಪಟ್ಟಿಯಿಂದ ಹಲವು ಬಾರಿ ರಾಕೆಟ್ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಆರೋಪಿಸಿದೆ.
ಶನಿವಾರ ಬೆಳಿಗ್ಗೆಯಿಂದಲೇ ರಾಕೆಟ್ ದಾಳಿ ಆರಂಭವಾಗಿದ್ದು, ಗಾಜಾ ಪಟ್ಟಿಯ ವಿವಿಧ ಕಡೆಗಳಿಂದ ಇಸ್ರೇಲಿನ ಭೂಭಾಗದೊಳಗೆ ಸ್ಪೋಟಗಳು ಕಂಡುಬಂದಿವೆ. ಇದಕ್ಕೆ ಉತ್ತರ ನೀಡಲು ಮುಂದಾಗಿರುವ ಇಸ್ರೇಲ್ ಯುದ್ಧದ ಪರಿಸ್ಥಿತಿಯನ್ನು ಘೋಷಣೆ ಮಾಡಿದೆ. ಹಮಾಸ್ ಉಗ್ರಗಾಮಿಗಳು 5,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಇಸ್ರೇಲ್‌ನೊಳಗೆ ನುಗ್ಗಿಸಿದ್ದಾರೆ.
ಇವು ಇಸ್ರೇಲ್‌ನಾದ್ಯಂತ ಭೀಕರ ಸಾವು ನೋವುಗಳಿಗೆ ಕಾರಣವಾಗಿರುವುದು ವಿಡಿಯೋಗಳಲ್ಲಿ ಬಹಿರಂಗಗೊಂಡಿವೆ.
ಇಸ್ರೇಲ್‌ನಲ್ಲಿ ಭಯೋತ್ಪಾದಕರೆಂದು ಪರಿಗಣಿಸಲ್ಪಟ್ಟಿರುವ ಹಮಾಸ್ ಉಗ್ರಗಾಮಿಗಳ ಒಳನುಸುಳುವಿಕೆಯ ಬಗ್ಗೆ ದೇಶದ ರಕ್ಷಣಾ ಪಡೆಗಳು ಜನರಿಗೆ ಎಚ್ಚರಿಕೆ ನೀಡಿವೆ. ದಾಳಿಯಲ್ಲಿ ಪ್ಯಾರಾಗ್ಲೈಡರ್‌ಗಳನ್ನು ಬಳಸಲಾಗಿದ್ದು, ನಾಗರಿಕರ ಪ್ರಾಣ ಹಾನಿಗೆ ಕಾರಣವಾಗಿವೆ.
ಈ ಭೀಕರ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲ್ ಯುದ್ಧವನ್ನು ಘೋಷಿಸಿದೆ. ಇದು ಜಾಗತಿಕವಾಗಿ ಭಾರೀ ಸಂಚಲವನ್ನು ಸೃಷ್ಟಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ