ಗಾಜಾ ಪಟ್ಟಿ ಸಂಘರ್ಷ : ಭಾರತಕ್ಕೆ ಇಸ್ರೇಲ್‌ ಮಾಡಿದ ಮನವಿಯಾದ್ರು ಏನು…?

ನವದೆಹಲಿ

   ಇತರ ಹಲವು ರಾಷ್ಟ್ರಗಳು ಮಾಡಿರುವಂತೆ  ಹಮಾಸ್ ಉಗ್ರ ಸಂಘಟನೆ ಎಂದು ಭಾರತ ನಿಷೇಧಿಸುವ ಸಮಯ ಬಂದಿದೆ ಎಂದು ಇಸ್ರೇಲಿ ರಾಯಭಾರಿ ನೌರ್ ಗಿಲೋನ್ ಬುಧವಾರ ಹೇಳಿದ್ದಾರೆ.

   ಪತ್ರಕರ್ತರೊಂದಿಗೆ ಸಂವಾದದಲ್ಲಿ ಮಾತನಾಡಿದ ಇಸ್ರೇಲಿ ರಾಯಭಾರಿ,  ಹಮಾಸ್ ವಿರುದ್ಧದ ಉಗ್ರ ವಿರೋಧಿ ಕಾರ್ಯಾಚರಣೆಗಳಲ್ಲಿ ಇಸ್ರೇಲ್‌ಗೆ ಶೇ. 100 ರಷ್ಟು  ಬೆಂಬಲ ನೀಡಿದ್ದಕ್ಕೆ ಭಾರತಕ್ಕೆ ಧನ್ಯವಾದ ಅರ್ಪಿಸಿದರು. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಕ್ರೂರ ದಾಳಿ ನಡೆಸಿದ ನಂತರ ಹಮಾಸ್  ಉಗ್ರ ಸಂಘಟನೆ ಎಂದು ಘೋಷಿಸಲು ಇಸ್ರೇಲ್ ಸಂಬಂಧಿತ ಭಾರತೀಯ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಅವರು ಹೇಳಿದರು.

   ಈ ವಿಷಯವನ್ನು ಮೊದಲೇ ಹೇಳಲಾಗಿತ್ತು ಎಂದ ಅವರು, ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಮೊದಲ ವಿಶ್ವ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರು. ಭಾರತ ಜಗತ್ತಿನಲ್ಲಿ ಬಹಳ ಪ್ರಮುಖ ನೈತಿಕ ಧ್ವನಿಯಾಗಿದೆ.  ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತ ನಮಗೆ ದೃಢವಾಗಿ ಬೆಂಬಲ ನೀಡುತ್ತಿದೆ. ಅಲ್ಲದೇ  ಪ್ರಮುಖ ದೇಶಗಳು ನಮ್ಮೊಂದಿಗಿವೆ ಎಂದು ಗಿಲೋನ್ ತಿಳಿಸಿದರು.

   ಅಕ್ಟೋಬರ್ 7 ರಂದು ಗಾಜಾದಿಂದ ಹಮಾಸ್ ಉಗ್ರಗಾಮಿಗಳು ದಾಳಿ ನಡೆಸಿದ ನಂತರ ಸೇಡು ತೀರಿಸಿಕೊಳ್ಳಲು ಇಸ್ರೇಲ್ ಪ್ರತಿದಾಳಿಯಿಂದಾಗಿ ಉಭಯ ರಾಷ್ಟ್ರಗಳ ನಡುವೆ ಯುದ್ಧವೇರ್ಪಟ್ಟಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap