ಸದ್ದಿಲ್ಲದೆ ಸಮುದ್ರಯಾನಕ್ಕೆ ತಯಾರಾದ ಇಸ್ರೋ…!

ನವದೆಹಲಿ :

    ಸಮುದ್ರದಾಳದ ಕೌತುಕ, ಬೆರಗು ಇಂದು ನಿನ್ನೆಯದಲ್ಲ, ಪ್ರಪಂಚದ ಸಾಕಷ್ಟು ದೇಶಗಳು ಸಮುದ್ರದಾಳದಲ್ಲಿ ಶೋಧ ನಡೆಸುತ್ತಲೇ ಇವೆ. ಅಕ್ಟೋಬರ್​ ಕೊನೆಯ ವಾರದಲ್ಲಿ ಯೋಜನೆ ಆರಂಭಗೊಳ್ಳಲಿದೆ.  ಮಾನವಸಹಿತ ಸಬ್‌ಮರ್ಸಿಬಲ್ ಮಿಷನ್ ಸಮುದ್ರಯಾನ ಯೋಜನೆಯನ್ನು ಭಾರತ ಸರ್ಕಾರ ಅನುಷ್ಠಾನಕ್ಕೆ ತರಲು ಹೊರಟಿದೆ. ಈ ಯೋಜನೆ ಅಡಿಯಲ್ಲಿ ಮತ್ಸ್ಯ 6000′ ಜಲಾಂತರ್ಗಾಮಿ ನೌಕೆಯನ್ನು ಅಭಿವೃದ್ಧಿಪಡಿಸಲಾಗಿದೆ.

   ಅಕ್ಟೋಬರ್ 2021 ರಲ್ಲಿ, ಸುಧಾರಿತ ಸಬ್‌ಮರ್ಸಿಬಲ್ ಸಾಮರ್ಥ್ಯಗಳೊಂದಿಗೆ ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್ ಮತ್ತು ಚೀನಾ ಸೇರಿದಂತೆ ದೇಶಗಳ ಆಯ್ದ ಕ್ಲಬ್‌ಗೆ ಭಾರತ ಸೇರಿಕೊಂಡಿತು. ಈ ಮೂಲಕ ವಿಶಿಷ್ಟವಾದ ಸಮುದ್ರಯಾನ ಮಿಷನ್ ಉಡಾವಣೆಯ ಭಾಗವಾಗಿತು.

   ಇಸ್ರೋದ ಚಂದ್ರಯಾನ ಮತ್ತು ಆದಿತ್ಯ ಎಲ್ 1 ನಂತರ ಇದು ಭಾರತದ ಅತಿದೊಡ್ಡ ಮಿಷನ್ ಎಂದು ಹೇಳಲಾಗುತ್ತಿದೆ. ಸಮುದ್ರಯಾನ ಅಭಿಯಾನ ಅಥವಾ ಮತ್ಸ್ಯ 6000 ಭಾರತದ ಮೊದಲ ಮಾನವಸಹಿತ ಜಲಾಂತರ್ಗಾಮಿ ಯಾತ್ರೆಯಾಗಿದ್ದು, ಇದರ ಮೂಲಕ ವಿಜ್ಞಾನಿಗಳು 6000 ಮೀಟರ್ ಆಳ ಸಮುದ್ರಕ್ಕೆ ಹೋಗಿ ಅಲ್ಲಿನ ಪರಿಸ್ಥಿತಿಗಳು ಮತ್ತು ಪ್ರಕ್ರಿಯೆಗಳನ್ನು ವಿಶೇಷ ಉಪಕರಣಗಳು ಮತ್ತು ಸಂವೇದಕಗಳ ಮೂಲಕ ಅಧ್ಯಯನ ಮಾಡುತ್ತಾರೆ.

  ಸಮುದ್ರಯಾನವು ಆಳ ಸಮುದ್ರದ ಖನಿಜಗಳಾದ ಪಾಲಿಮೆಟಾಲಿಕ್, ಕೋಬಾಲ್ಟ್ , ಮ್ಯಾಂಗನೀಸ್ ಅನ್ವೇಷಿಸುವ ಗುರಿ ಹೊಂದಿದೆ. ಭಾರತದ ಮೂವರು ಮತ್ಸ್ಯ 6000 ಎಂಬ ನೌಕೆಯಲ್ಲಿ ಆಳಸಮುದ್ರಕ್ಕೆ ಹೋಗಿ, ಶೋಧ ನಡೆಸಲಿದ್ದಾರೆ. ಚೆನ್ನೈ ಸನಿಹದಲ್ಲಿರುವ ಸಾಗರದ ನೀರಿನಲ್ಲಿ ಭಾರತ ಹೊಸ ಶೌರ್ಯಕ್ಕೆ ಸಜ್ಜಾಗಿದೆ.

   ನಿಕ್ಕೆಲ್‌, ಕೊಬಾಲ್ಟ್, ಮ್ಯಾಂಗನೀಸ್‌, ಹೈಡ್ರೋಥರ್ಮಲ್‌ ಸಲ್ಫೈಟ್ಸ್​ ಮತ್ತು ಗ್ಯಾಸ್‌ ಹೈಡ್ರೇಟ್ಸ್‌. ಜತೆಗೆ, ಸಮುದ್ರದಾಳದ ಜೀವ ವೈವಿಧ್ಯತೆ ಕುರಿತಂತೆ ಶೋಧ ನಡೆಯಲಿದೆ. 6,000 ಮೀ. ಕೆಳಗೆ ನೌಕೆ ಮೇಲೆ ಭಾರೀ ಒತ್ತಡ ಬೀಳುತ್ತದೆ. ಅಂದರೆ, ಆಚೆಗಿಂತ 600 ಪಟ್ಟು ಹೆಚ್ಚು ಒತ್ತಡವಿರುತ್ತದೆ.

   ನೌಕೆಯ ತೂಕ -25 ಟನ್‌ ಉದ್ದ – 9 ಮೀ. ಎತ್ತರ – 4.5 ಮೀ. ಅಗಲ – 4 ಮೀ. ಸುತ್ತಳತೆ – 2.1ಮೀ. ನೌಕೆಯೊಳಗೆ ಇರಬಹುದಾದ ಸಮಯ- 12 ಗಂಟೆ ತುರ್ತು ಸ್ಥಿತಿಯಲ್ಲಿ ಇರಬಹುದಾದ ಸಮಯ – 96 ಗಂಟೆ

Recent Articles

spot_img

Related Stories

Share via
Copy link
Powered by Social Snap