ಐತಿಹಾಸಿಕ ಸಾಧನೆ ಮಾಡಿದ ಇಸ್ರೋ….!

ಶ್ರೀಹರಿಕೋಟಾ: 

    ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೊಸ ವರ್ಷದ ಮೊದಲ ದಿನವೇ ಐತಿಹಾಸಿಕ ಉಡಾವಣೆ ಮಾಡಿದ್ದು, ಎಕ್ಸ್‌ಪೋಸ್ಯಾಟ್‌ ಉಪಗ್ರಹವನ್ನು ಹೊತ್ತ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌  ಸಿ58 ನೌಕೆ ಯಶಸ್ವಿಯಾಗಿ ನಭಕ್ಕೆ ಹಾರಿದೆ.

    ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌  ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಗಿದ್ದು, ಆ ಮೂಲಕ ಇಸ್ರೋ ಹೊಸ ವರ್ಷದ ದಿನವೇ ಇಸ್ರೋ ಇತಿಹಾಸ ಸೃಷ್ಟಿಸಿದೆ. ದೇಶದ ಮೊದಲ ಎಕ್ಸ್-ರೇ ಪೋಲರಿಮೀಟರ್ಉಪಗ್ರಹ ಎಕ್ಸ್‌ಪೋಸ್ಯಾಟ್  ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಇದರ ಜೊತೆಗೆ ಪಿಎಸ್‌ಎಲ್‌ವಿ ಇತರ ಹತ್ತು ಉಪಗ್ರಹಗಳನ್ನು ಹೊತ್ತೊಯ್ದಿದೆ. ಈ ಉಪಗ್ರಹಗಳನ್ನು ಸ್ಟಾರ್ಟ್‌ಅಪ್ಸ್, ಶೈಕ್ಷಣಿಕ ಸಂಸ್ಥೆಗಳು ಮತ್ತು ಇಸ್ರೋ ಕೇಂದ್ರಗಳು  ನಿರ್ಮಾಣ ಮಾಡಿವೆ.

    ಸ್ಟಾರ್ಟ್‌ಅಪ್ಸ್, ಶೈಕ್ಷಣಿಕ ಸಂಸ್ಥೆಗಳು ಮತ್ತು ಇಸ್ರೋ ಕೇಂದ್ರಗಳು ಅಭಿವೃದ್ಧಿಪಡಿಸಿರುವ ಇತರ 10 ಉಪಗ್ರಹಗಳನ್ನೂ ಈ ಪಿಎಸ್‌ಎಲ್‌ ಹೊತ್ತೊಯ್ದಿದೆ. ಟೇಕ್‌ಮೀ2ಸ್ಪೇಸ್‌ನ ರೇಡಿಯೇಶನ್ ಶೀಲ್ಡಿಂಗ್ ಎಕ್ಸ್‌ಪೆರಿಮೆಂಟಲ್ ಮಾಡ್ಯೂಲ್ , ಮಹಿಳೆಯರಿಗಾಗಿ ಎಲ್‌ಬಿಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ತಯಾರಿಸಲಾಗಿರುವ ವುಮೆನ್ ಇಂಜಿನಿಯರ್ಡ್ ಸ್ಯಾಟಲೈಟ್ (ವೆಸ್ಯಾಟ್), ಕೆ.ಜೆ.ಸೋಮಯ್ಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅವರ ಬಿಲೀಫ್‌ಸಾ-ಟಿ0 ಹವ್ಯಾಸಿ ರೇಡಿಯೋ ಉಪಗ್ರಹ, ಇನ್ಸ್‌ಪೆಕ್ಟಿಟಿ ಸ್ಪೇಸ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್‌ನ ಗ್ರೀನ್ ಇಂಪಲ್ಸ್ ಟ್ರಾನ್ಸ್ಮಿಟರ್ , ಧ್ರುವಾ ಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನಿಂದ ಲಾಂಚಿಂಗ್ ಎಸ್ಪಿಎಡಿಷನ್ಸ್ ಫಾರ್ ಅಸ್ಪಿರಿನ್ಗ್ ಟೆಕ್ನಾಲಜೀಸ್ -ಟೆಕ್ನಾಲಜಿ ಡೆಮೋನ್ಸ್ಟ್ರಾಟೋರ್ , ಬೆಲಟ್ರಿಕ್ಸ್‌ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನಿಂದ ರುದ್ರ 0.3 ಮತ್ತು ಅರ್ಕಾ-200, ಪಿಆರ್‌ಎಲ್‍‌ನಿಂದ ಡಸ್ಟ್ ಎಕ್ಸ್‌ಪರಿಮೆಂಟ್ ,ವಿಎಸ್‌ಎಸ್‌ಸಿ ಮ್ತತು ಇಸ್ರೋದಿಂದ ಇಸ್ರೋ ಫುಯೆಲ್ ಸೆಲ್ ಪವರ್ ಸಿಸ್ಟಮ್(ಎಫ್‌ಸಿಪಿಎಸ್) ಹಾಗೂ ಹೈ ಎನರ್ಜಿ ಸೆಬ್ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಹೊತ್ತೊಯ್ದಿದೆ. 

    ಎಕ್ಸ್‌ಪೋಸ್ಯಾಟ್ ಮಿಷನ್ ಅನ್ನು ತೀವ್ರವಾದ ಎಕ್ಸ್-ರೇ ಮೂಲಗಳ ಧ್ರುವೀಕರಣವನ್ನು ತನಿಖೆ ಮಾಡಲು ವಿನ್ಯಾಸಗೊಳಿಸಲಾಗಿದ್ದು, 2021ರಲ್ಲಿ ಬಿಡುಗಡೆಯಾದ ನಾಸಾದ ಇಮೇಜಿಂಗ್ ಎಕ್ಸ್-ರೇ ಪೊಲರಿಮೆಟ್ರಿ ಎಕ್ಸ್‌ಪ್ಲೋರರ್ (IXPE) ನಂತರ ಈ ಮಿಷನ್ ಭಾರತದ ಮೊದಲ ಮೀಸಲಾದ ಪೋಲರಿಮೀಟರ್ ಮಿಷನ್ ಮಾತ್ರವಲ್ಲದೆ ವಿಶ್ವದ ಎರಡನೆಯ ಉಪಗ್ರಹವಾಗಿದೆ.

    ಯು ಆರ್ ರಾವ್ ಉಪಗ್ರಹ ಕೇಂದ್ರದ ಸಹಯೋಗದೊಂದಿಗೆ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಆರ್‌ಆರ್‌ಐ) ಅಭಿವೃದ್ಧಿಪಡಿಸಿದ ಈ ಉಪಕರಣಗಳು ಆಕಾಶ ವಸ್ತುಗಳ ಭೌತಶಾಸ್ತ್ರದ ಬಗ್ಗೆ ಹೊಸ ಒಳನೋಟಗಳನ್ನು ನೀಡುವ ನಿರೀಕ್ಷೆಯಿದೆ. ಕ್ಷ ಕಿರಣಗಳ ಧ್ರುವೀಕರಣವನ್ನು ಅಳೆಯುವ ಮೂಲಕ, ವಿಜ್ಞಾನಿಗಳು ಈ ದೂರದ ಮೂಲಗಳ ರೇಖಾಗಣಿತ ಮತ್ತು ಹೊರಸೂಸುವಿಕೆಯ ಕಾರ್ಯವಿಧಾನಗಳ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಊಹಿಸಬಹುದಾಗಿದೆ.

   ಪಲ್ಸಾರ, ಕಪ್ಪು ಕುಳಿ ಎಕ್ಸ್-ರೇ ಬೈನರಿಗಳು, ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್‌ಗಳು, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಉಷ್ಣವಲ್ಲದ ಸೂಪರ್‌ನೋವಾ ಅವಶೇಷಗಳನ್ನು ಒಳಗೊಂಡಂತೆ ವಿಶ್ವದಲ್ಲಿ ತಿಳಿದಿರುವ 50 ಪ್ರಕಾಶಮಾನವಾದ ಮೂಲಗಳನ್ನು ಅಧ್ಯಯನ ಮಾಡುವ ಗುರಿಯನ್ನು ಎಕ್ಸ್‌ಪೋಸ್ಯಾಟ್ ಮಿಷನ್ ಹೊಂದಿದೆ. ಉಪಗ್ರಹವನ್ನು 500-700 ಕಿಮೀ ವೃತ್ತಾಕಾರದ ಕಡಿಮೆ ಭೂಮಿಯ ಕಕ್ಷೆಯಲ್ಲಿ ಇರಿಸಲಾಗುವುದು, ಕನಿಷ್ಠ ಐದು ವರ್ಷಗಳ ಮಿಷನ್ ಸಕ್ರಿಯವಾಗಿರಲಿದೆ. ಕಪ್ಪು ಕುಳಿಗಳ ಕುರಿತು ಇದು ಅಧ್ಯಯನ ಮಾಡಲಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap