ಪಾಟ್ನಾ:
ಬಿಹಾರದ ಗಯಾದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಖಾಸಗಿ ಉದ್ಯೋಗದಲ್ಲಿ ತಿಂಗಳಿಗೆ 10 ಸಾವಿರ ಸಂಬಳ ಪಡೆಯುತ್ತಿರುವ ವ್ಯಕ್ತಿಯೊಬ್ಬರಿಗೆ 2 ಕೋಟಿ ರೂಪಾಯಿ ಆದಾಯ ತೆರಿಗೆ ನೋಟೀಸ್ ಬಂದಿದೆ. ಜೊತೆಗೆ ಎರಡು ದಿನದೊಳಗೆ 67 ಲಕ್ಷ ರೂಪಾಯಿ ಠೇವಣಿ ಇಡುವಂತೆ ಸೂಚಿಸಲಾಗಿದೆ.
ಗಯಾದ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸ ಗೋಡೌನ್ ಪ್ರದೇಶದ ನಿವಾಸಿ ರಾಜೀವ್ ಕುಮಾರ್ ವರ್ಮಾ ಅವರು ಹಳೆಯ ಗೋಡೌನ್‌ನಲ್ಲಿ ಕೆಲಸ ಮಾಡುತ್ತಾರೆ. ಸದ್ಯ ಐಟಿ ನೋಟಿಸ್‌ನಿಂದ ತಲೆಕೆಡಿಸಿಕೊಂಡಿರುವ ಯುವಕ, ಕೆಲಸ ಬಿಟ್ಟು ಆದಾಯ ತೆರಿಗೆ ಇಲಾಖೆ ಕಚೇರಿ ಅಲೆದಾಡುತ್ತಿದ್ದಾರೆ. ಜೀವನವಿಡೀ ಕೂಲಿ ಮಾಡಿದರೂ ಇಷ್ಟು ದುಡ್ಡು ಸಂಪಾದಿಸಲು ಆಗುವುದಿಲ್ಲ ಎಂದು ಸಂತ್ರಸ್ತ ಯುವಕ ಹೇಳಿದ್ದಾನೆ.
2015ರ ಜನವರಿ 22ರಂದು ಕಾರ್ಪೊರೇಷನ್ ಬ್ಯಾಂಕ್‌ನ ಗಯಾ ಶಾಖೆಯಲ್ಲಿ 2 ಲಕ್ಷ ರೂಪಾಯಿ ಸ್ಥಿರ ಠೇವಣಿ ಇಟ್ಟಿದೆ. ಆದರೆ 2016 ರ ಆಗಸ್ಟ್ 16ನೇ ರಂದು ಮುಕ್ತಾಯಗೊಳ್ಳುವ ಮೊದಲು ಹಣವನ್ನು ಹಿಂಪಡೆಯಲಾಗಿದೆ ಎಂದು ಸಂತ್ರಸ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಆದಾಯ ತೆರಿಗೆ ಇಲಾಖೆ ಕಚೇರಿಗೆ ರಾಜೀವ್ ಕುಮಾರ್ ತೆರಳಿದ್ದರು. ಆಗ ಅಲ್ಲಿಯವರು ಈ ಬಗ್ಗೆ ಮೇಲ್ಮನವಿ ಸಲ್ಲಿಸುವಂತೆ ತಿಳಿಸಿದ್ದಾರೆ. ಅಲ್ಲದೇ ಒಂದು ವೇಳೆ ಏನಾದರೂ ಅನಾಹುತ ಸಂಭವಿಸಿದರೆ ತಾಂತ್ರಿಕ ದೋಷದಿಂದ ಆಗಿರಬಹುದು ಎಂದು ಹೇಳಲಾಗಿದೆ. ಆದರೆ ಈ ಆದಾಯ ತೆರಿಗೆ ಬಗ್ಗೆ ನನಗೆ ತಿಳಿದಿಲ್ಲ ಎಂದು ರಾಜೀವ್ ಕುಮಾರ್ ವರ್ಮಾ ಹೇಳಿದ್ದಾರೆ.
