ಉಡುಪಿ
ಇಂದು ಎಂಜಿಎಂ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿದರು. ಇದಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರಾದ ಡಾ.ಎಂ. ಪ್ರಭಾಕರ ಜೋಶಿ ಅವರನ್ನು ಕಡಿಯಾಳಿ ದೇವಸ್ಥಾನದ ಮುಂಭಾಗ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ಕಲೆಯ ಮೂಲ ಉಳಿಸುವ ಮೂಲಕ ಶಾಲೆ ಕಾಲೇಜುಗಳಲ್ಲಿ ಯಕ್ಷಗಾನದ ಮಹತ್ವ ತಿಳಿಸಿ, ಪಠ್ಯವಾಗಿ ಕಲಿಸುವ ಯತ್ನವಾಗಬೇಕು. ಜೊತೆಗೆ ಪ್ರಧಾನಿ ಮೋದಿ ಪ್ರತಿಪಾದಿಸಿದ ವೋಕಲ್ ಫಾರ್ ಲೋಕಲ್ ಯೋಜನೆಯಡಿ ಯಕ್ಷಗಾನ ಉಳಿಸಬೇಕು. ಯಕ್ಷಗಾನ ಕಲೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರಿಗಿದೆ. ದೇವಳ, ಭಾರತೀಯ ಸಂಸ್ಕೃತಿ, ವೇದ ಪುರಾಣ, ನಾಟ್ಯ ಸಂಗೀತದ ಅವಿನಾಭಾವ ಸಂಬಂಧ ಯಕ್ಷಗಾನಕ್ಕಿದೆ. ಸಾಮಾಜಿಕ ನಾಟಕಕ್ಕೆ ಯಕ್ಷಗಾನ ಬಳಸಬೇಡಿ. ಯಕ್ಷಗಾನದ ತಳಪಾಯ ಅಲುಗಾಡಿಸಬೇಡಿ. ಗಂಡು ಕಲೆಯನ್ನು ಹೆಣ್ಣು ಮಕ್ಕಳು ಕಲಿಯುತ್ತಿರುವುದು ಶ್ಲಾಘನೀಯ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಈ ಮೆರವಣಿಗೆಯೊಂದಿಗೆ ಸಾಂಸ್ಕೃತಿಕ ಕಲಾ ಪ್ರಕಾರಗಳು ಸಾಗಿದವು. ಇಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಸಹಸ್ರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರೊಂದಿಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಶಾಸಕ ರಘುಪತಿ ಭಟ್, ಮೈಸೂರು ಎಲೆಕ್ಟಕ್ರಿಕ್ ಇಂಡಸ್ಟ್ರಿಸ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಯಕ್ಷಗಾನ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿಎಲ್. ಹೆಗಡೆ, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲಾ ಪಂಚಾಯಿತಿ ಸಿಇಒ ಎಚ್ ಪ್ರಸನ್ನ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
