ತುಮಕೂರು
ಗ್ರೇಟರ್ ಬೆಂಗಳೂರು ಆಗಿ ತುಮಕೂರು ಅಭಿವೃದ್ಧಿ
ರಾಜ್ಯಕ್ಕೆ ಪ್ರಧಾನಿ ಮೋದಿ ಅವರು ಬರುವುದನ್ನು ನಾನು ವಿರೋಧಿಸುವುದಿಲ್ಲ. ಆದರೆ ಮಿಜೋರಾಂ, ಮಣಿಪುರ ಸೇರಿದಂತೆ ರಾಷ್ಟçದ ಗಡಿಪ್ರದೇಶಗಳಲ್ಲಿ ಗಲಭೆಗಳು, ಪರಿಸ್ಥಿತಿಗಳು ಸರಿ ಇಲ್ಲದೆ ಇರುವಾಗ ದೇಶದ ಚುಕ್ಕಾಣಿ ಹಿಡಿದ ಪ್ರಧಾನಿಯವರು ಪದೇ ಪದೇ ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸುವುದು ಎಷ್ಟರ ಮಟ್ಟಿಗೆ ಸರಿ? ವಿದೇಶಾಂಗ ನೀತಿ, ದೇಶದ ರಕ್ಷಣೆ ಬಗ್ಗೆ ಗಮನಹರಿಸುವುದು ಪ್ರಧಾನಿಯಾದವರ ಮೊದಲ ಕರ್ತವ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಶಾನ್ಯ ರಾಜ್ಯಗಳ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿರುವಾಗ ಪ್ರಧಾನಿಯಾದವರು ರಾಷ್ಟçದ ರಾಜಧಾನಿಯಲ್ಲಿದ್ದುಕೊಂಡು ಆಂತರಿಕ ಭದ್ರತೆಗೆ ಸಂಬAಧಿಸಿದAತೆ ರಾಜತಾಂತ್ರಿಕಮಾರ್ಗಗಳ ಪರಿಹಾರ ಚಿಂತಿಸಬೇಕೇ ವಿನಃ ಕೇವಲ ಒಂದು ರಾಜ್ಯದ ಚುನಾವಣೆಗೆ ಹೆಚ್ಚು ಸಮಯ ಮೀಸಲಿಡುವುದು ತರವಲ್ಲ.
ಮೋದಿ, ಷಾ ಎಷ್ಟೇ ಬಾರಿ ಬಂದರೂ ಈ ಬಾರಿ ಕಾಂಗ್ರೆಸ್ ಮರಳಿ ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಜನ ಬೇಸತ್ತಿದ್ದು, ನಮ್ಮ ಪ್ರಣಾಳಿಕೆಯ ಪ್ರಮುಖಾಂಶವೇ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿದೆ ಎಂದರು.
ಸೇವೆಯನ್ನು ಮರೆತಿಲ್ಲ: ಕೊರಟಗೆರೆ ಕ್ಷೇತ್ರದಲ್ಲಿ ರಾಜಕೀಯ ಎದುರಾಳಿಗಳು ತಮ್ಮ ವಿರುದ್ದ ವೈಟ್‌ಕಾಲರ್, ಕೈಗೆ ಸಿಗೋಲ್ಲವೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಕೊರಟಗೆರೆಯು ಮತದಾರರು ತಾವು ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ, ಜನತೆಯ ಸಮಸ್ಯೆಗಳ ಪರಿಹಾರಕ್ಕಾಗಿ ಮಾಡಿದ ಕೆಲಸಗಳನ್ನು ಗುರುತಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆಯನ್ನು ಮರೆತಿಲ್ಲ. ಚುನಾವಣೆಯಲ್ಲಿ ಕ್ಷೇತ್ರದ ಪ್ರಜ್ಞಾವಂತ ಮತದಾರರು ಮತ್ತೆ ತಮ್ಮ ಕೈ ಹಿಡಿಯುವ ವಿಶ್ವಾಸ ಅಚಲವಾಗಿದೆ.
ಮತ್ತೆ ಶಾಸಕರಾಗಿ ಆಯ್ಕೆಯಾಗುವುದರೊಂದಿಗೆ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವ ಜೊತೆಗೆ ಲಾಲ್‌ಬಾಗ್ ಮಾದರಿ ಉದ್ಯಾನವನ, ವಸಂತಾ ನರಸಾಪುರ ಕೈಗಾರಿಕಾ ಕಾರಿಡಾರ್ ಅನ್ನು 4ಲಕ್ಷ ಮಂದಿಗೆ ಉದ್ಯೋಗ ದೊರಕಿಸುವ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ದೂರದೃಷ್ಟಿ ಹೊಂದಲಾಗಿದೆ, ಇದಕ್ಕಾಗಿಯೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಗ್ರೇಟರ್ ಬೆಂಗಳೂರು ಯೋಜನೆಯನ್ನು ಘೋಷಿಸಲಾಗಿದೆ ಎಂದರು.
ವಸಂತಾ ನರಸಾಪುರದವರೆಗೆ ಮೆಟ್ರೊ ತರುವ ಯೋಜನೆ; ತುಮಕೂರಿನಲ್ಲಿ ಏಷಿಯಾದ ಬೃಹತ್ ಕೈಗಾರಿಕಾ ಪ್ರದೇಶವಾದ ವಸಂತನರಸಾಪುರವಿದೆ, ಇಲ್ಲಿಗೆ ತುಮಕೂರಿನ ಮೂಲಕ ಮೆಟ್ರೋ ರೈಲು ತರಬೇಕು ಎಂಬ ಆಶಯ ತಮ್ಮದು, ಮೆಟ್ರೋ ರೈಲು ಬರುವುದರಿಂದ ತುಮಕೂರಿನ ಅಭಿವೃದ್ಧಿ ಯಾಗುತ್ತದೆ, ನವಿ ಮಂಬಯಿಯಂತೆ ತುಮಕೂರು ಬೆಂಗಳೂರಿನ ಗ್ರೇಟರ್ ಆಗಿ ಬೆಳೆಸಬೇಕು ಎಂಬ ದೂರದೃಷ್ಠಿಯಿಂದ ಪ್ರಣಾಳಿಕೆಯಲ್ಲಿ ಮೆಟ್ರೊ ಅಂಶವನ್ನು ಸೇರ್ಪಡೆ ಮಾಡಿದ್ದೇನೆ ಎಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕಾ ಸಮಿತಿ ಅಧ್ಯಕ್ಷರೂ ಆಗಿರುವ ಪರಮೇಶ್ವರ್ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಬಂದಲ್ಲಿ ತಮಗೆ ಮುಖ್ಯಮಂತ್ರಿ ಗಾದಿ ಸಿಗಲಿದೆಯೇ ಎಂಬ ಪ್ರಶ್ನೆಗೆ ಎಲ್ಲವನ್ನು ಪಕ್ಷದ ಹೈಕಮಾಂಡ್ ಅಣತಿಯಂತೆ ಶಾಸಕಾಂಗ ಸಭೆಯಲ್ಲಿ ಶಾಸಕರು ನಿರ್ಧರಿಸಲಿದ್ದಾರೆ. ಮೊದಲು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಮುಖ್ಯ ಎಂದರು. ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಇತರರಿದ್ದರು.
ಅಗತ್ಯವಸ್ತಗಳ ಬೆಲೆ ಹೆಚ್ಚಳ, ಬಿಜೆಪಿ ಭ್ರಷ್ಟಾಚಾರದ ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೇಯಲ್ಲಿ ಪೂರ ಕವಾಗಿದೆ. ಇನ್ನೂ ಜೆಡಿಎಸ್ ಬಗ್ಗೆ ಜನರಿಗೆ ನಂಬಿಕೆ ಇಲ್ಲ, ಆ ಪಕ್ಷ ಸ್ವಂತ ಶಕ್ತಿಯಿಂದ ಆಡಳಿತಕ್ಕೆ ಬರುವುದಿಲ್ಲ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ, ಆದ್ದರಿಂದ ಮತದಾರರು ಜೆಡಿಎಸ್ ಪರ ಮತನೀಡುವುದಿಲ್ಲ.
-ಡಾ.ಜಿ.ಪರಮೇಶ್ವರ, ಮಾಜಿ ಡಿಸಿಎಂ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
