ಬೆಂಗಳೂರು :
ತೆರಿಗೆ ಪಾವತಿ (ಐಟಿಆರ್) ಗಡುವನ್ನು ಸೆಪ್ಟೆಂಬರ್ 30 ರಿಂದ ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ. ಈ ತಿಂಗಳಾಂತ್ಯದವರೆಗೆ ಗಡುವು ವಿಸ್ತರಿಸಿ ಈ ಹಿಂದೆ ಆದೇಶಿಸಲಾಗಿತ್ತು.
ಆದರೆ ಆದಾಯ ತೆರಿಗೆ ವೆಬ್ ಫೋರ್ಟಲ್, ಆನ್ಲೈನ್ ಸೇವಾ ಸಮಸ್ಯೆಯಲ್ಲಿ ಸಾಕಷ್ಟು ನ್ಯೂನತೆಗಳು ಮುಂದುವರಿದ ಕಾರಣ ಈ ಬಗ್ಗೆ ಸಾಕಷ್ಟು ದೂರುಗಳು ಸಲ್ಲಿಕೆಯಾಗಿದ್ದವು. ಇದೆಲ್ಲವನ್ನು ಪರಿಗಣಿಸಿ 2021ರ ಡಿಸೆಂಬರ್ 31ರವರೆಗೆ ಆದಾಯ ತೆರಿಗೆ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ