ಜೆಪಿ ನಗರ – ಹೆಬ್ಬಾಳ ಮಧ್ಯೆ ಬೆಂಗಳೂರಿನ ಅತಿ ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್

ಬೆಂಗಳೂರು

   ಬೆಂಗಳೂರಿನಲ್ಲಿ ಜೆಪಿ ನಗರದಿಂದ ಹೆಬ್ಬಾಳ ವರೆಗೆ ಮತ್ತೊಂದು ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣವಾಗಲಿದ್ದು, ಇದು ಬೆಂಗಳೂರಿನ ಅತಿ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆಯಾಗಿರಲಿದೆ. ಈ ಮೇಲ್ಸೇತುವೆ ಔಟರ್ ರಿಂಗ್ ರೋಡ್​ನಲ್ಲಿ ಹಾದುಹೋಗಲಿದ್ದು, 32.15 ಕಿ.ಮೀ ಉದ್ದವಿರಲಿದೆ. ರಾಗಿ ಗುಡ್ಡದಿಂದ ಸಿಲ್ಕ್ ಬೋರ್ಡ್ ವರೆಗೆ ಇರುವ ಡಬಲ್ ಡೆಕ್ಕರ್ ಫ್ಲೈ ಓವರ್ ಮಾದರಿಯಲ್ಲಿಯೇ ಇದು ಕೂಡ ಇರಲಿದ್ದು, ಮೆಟ್ರೋ ಲೈನ್ ಕೂಡ ಇರಲಿದೆ.

 
   40 ಕಿಲೋಮೀಟರ್‌ಗಳಿಗಿಂತ ಹೆಚ್ಚು ವಿಸ್ತಾರವಾಗಿರುವ ನಮ್ಮ ಮೆಟ್ರೋ ಹಂತ 3 ರ ಭಾಗವಾಗಿರುವ ಈ ಹೊಸ ಕಾರಿಡಾರ್ ಡಬಲ್ ಡೆಕ್ಕರ್ ಫ್ಲೈಓವರ್ ಒಳಗೊಂಡಿರುತ್ತದೆ. ಯೋಜನೆಯ ಕಾರ್ಯಸಾಧ್ಯತಾ ಅಧ್ಯಯನವು ಈಗಾಗಲೇ ಶೇಕಡಾ 90 ರಷ್ಟು ಪೂರ್ಣಗೊಂಡಿದೆ. ಆದರೂ ಎತ್ತರದ ರಸ್ತೆಗಳು ಮತ್ತು ಮೆಟ್ರೋ ಮಾರ್ಗವನ್ನು ಜತೆಯಾಗಿ ನಿರ್ಮಾಣ ಮಾಡಬೇಕಾದ ಅಗತ್ಯವಿರುವುದರಿಂದ ಕೆಲವು ಹೊಂದಾಣಿಕೆಗಳನ್ನು ಮಾಡಬೇಕಿದೆ. ಈ ಕಾರಣಕ್ಕೆ ತುಸು ವಿಳಂಬವಾಗುತ್ತಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರವು ಕಳೆದ ವರ್ಷದ ಆಗಸ್ಟ್‌ನಲ್ಲಿ ಯೋಜನೆಗೆ ಅನುಮೋದನೆ ನೀಡಿತ್ತು.  
   ನಗರದ ದೀರ್ಘಕಾಲೀನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ರೂಪಿಸಲಾಗಿದೆ. ವೆಚ್ಚವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ನಮ್ಮ ಮೆಟ್ರೋ ನಡುವೆ ಸಮಾನವಾಗಿ ಹಂಚಿಕೊಳ್ಳಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link