ತಿರುಪತಿ
ತಿರುಮಲ ದೇವಸ್ಥಾನದಲ್ಲಿ ನೀಡುವ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎನ್ನುವ ವಿಷಯವು ಇದೀಗ ಸಂಪೂರ್ಣ ರಾಜಕೀಯ ತಿರುಪಡೆದುಕೊಂಡಿದ್ದು, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್‌ಮೋಹನ ರೆಡ್ಡಿ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಡುವೆ ತೀವ್ರ ವಾಗ್ದಾಳಿ ಮುಂದುವರಿದಿದೆ.ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿರುವ ಜಗನ್ ಸತ್ಯಮೇವ ಜಯತೆ ಎಂದಿದ್ದಾರೆ.
ಪವಿತ್ರ ಪ್ರಸಾದವಾದ ತಿರುಪತಿ ಲಡ್ಡುವಿನಲ್ಲಿ ಹಸುವಿನ ಕೊಬ್ಬಿನ ಅಂಶ, ಹಂದಿಯ ಕೊಬ್ಬಿನ ಅಂಶ ಹಾಗೂ ಮೀನಿನ ಎಣ್ಣೆಯನ್ನು ಬಳಸಲಾಗಿದೆ ಎನ್ನುವ ವಿಚಾರವು ತೀವ್ರ ಚರ್ಚೆಗೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದಲೂ ದೇಶದಲ್ಲಿ ಈ ವಿಷಯ ಚರ್ಚೆಯಾಗುತ್ತಿದ್ದು, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಈ ವಿಷಯ ವ್ಯಾಪಕ ಆಕ್ರೋಶ ಹಾಗೂ ರಾಜಕೀಯ ಬಣ್ಣವನ್ನು ಪಡೆದುಕೊಂಡಿದೆ. ಇದೀಗ ಈಚೆಗೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗಲು ನನ್ನನ್ನು ಬಿಡುತ್ತಿಲ್ಲ. ಮಾಜಿ ಸಿ.ಎಂ ಹಾಗೂ ವಿರೋಧ ಪಕ್ಷದ ನಾಯಕನಾದ ನನ್ನನ್ನೇ ಇವರು ತಿರುಪತಿಗೆ ಬಿಡುತ್ತಿಲ್ಲ. ಇನ್ನು ದಲಿತರನ್ನು ಹೇಗೆ ನಡೆಸಿಕೊಳ್ಳುತ್ತಾರೋ ಎಂದು ಜಗನ್ ಪ್ರಶ್ನೆ ಮಾಡಿದ್ದರು.
ಜಗನ್ ಮಾತಿಗೆ ಕೆಂಡಮಂಡಲರಾಗಿದ್ದ ಚಂದ್ರಬಾಬು ನಾಯ್ಡು ಅವರು ಏಕೆ ಸುಮ್ಮನ್ನೆ ಸುಳ್ಳು ಹೇಳುತ್ತೀರಿ, ನಾವು ಪೊಲೀಸರ ಮೂಲಕ ತಡೆದಿದ್ದು ನಿಜವೇ ಆಗಿದ್ದರೆ ಆಂಧ್ರಪ್ರದೇಶ ಪೊಲೀಸರು ನೀಡಿದ್ದ ನೋಟಿಸ್ ಅನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಿ ಎಂದು ಜಗನ್‌ಗೆ ಚಂದ್ರಬಾಬು ನಾಯ್ಡು ಸವಾಲು ಹಾಕಿದ್ದರು. ಇದೀಗ ನೋಟಿಸ್ ಅನ್ನು ಜಗನ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಆಂಧ್ರಪ್ರದೇಶದ ಪೊಲೀಸರು ನೀಡಿದ್ದರು ಎನ್ನಲಾಗಿರುವ ನೋಟಿಸ್ ಕಾಪಿಯನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಜಗನ್ ಮೋಹನ್ ರೆಡ್ಡಿ ಅವರು, ಇದು ಏನು ಇದು ಸಾಕ್ಷಿ ಸಾಕಲ್ಲವೇ ಎಂದು ಪ್ರಶ್ನೆ ಮಾಡಿದ್ದು. ಸತ್ಯಮೇವ ಜಯತೆ ಎಂದು ಹೇಳಿದ್ದಾರೆ. ಈ ಮೂಲಕ ಚಂದ್ರಬಾಬು ನಾಯ್ಡು ಅವರು ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವುದಕ್ಕೆ ಚಂದ್ರಬಾಬು ನಾಯ್ಡು ಅವರನ್ನು ಯಾರೂ ತಡೆದಿಲ್ಲ ಎಂದಿದ್ದ ಪ್ರಶ್ನೆಗೆ ತಿರುಗೇಟು ನೀಡಿದ್ದಾರೆ.
ಆಂಧ್ರಪ್ರದೇಶದ ಪೊಲೀಸರು ನೀಡಿದ್ದರು ಎನ್ನಲಾಗಿರುವ ನೋಟಿಸ್‌ನಲ್ಲಿ, ಮಾನ್ಯ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ನೀವು ಸೆಪ್ಟೆಂಬರ್ 27ರಂದು ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದೀರಿ ಎಂದು ತಿಳಿದು ಬಂದಿದೆ. ಈ ಪ್ರವಾಸಕ್ಕೆ ಅವಕಾಶ ಇರುವುದಿಲ್ಲ ಎಂದು ಪೊಲೀಸ್ ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ನಿಮ್ಮ ಪಕ್ಷದ (ವೈಎಸ್‌ಆರ್ ಕಾಂಗ್ರೆಸ್) ನಾಯಕರು, ಕಾರ್ಯಕರ್ತರು ಹಾಗೂ ಬೆಂಬಲಿಗರು ತಿರುಪತಿ ತಿರುಮಲ ದರ್ಶನಕ್ಕೆ ಖಾಸಗಿ ವಾಹನಗಳಲ್ಲಿ ಬರುತ್ತಿದ್ದಾರೆ. ದಯವಿಟ್ಟು ಅವರ ಗಮನಕ್ಕೆ ತನ್ನಿ ಈ ಕಾರ್ಯಕ್ರಮಕ್ಕೆ ಅನುಮತಿ ಇರುವುದಿಲ್ಲ (ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವುದು) ಪೂಜೆಯಲ್ಲಿ ಭಾಗವಹಿಸುವುದು ನಿಯಮ ಬಾಹಿರ (ಕಾನೂನಿ ಉಲ್ಲಂಘನೆ). ಇದು ಕಾನೂನಿ ಉಲ್ಲಂಘನೆಯಾಗುತ್ತದೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇವೆ ಎಂದು ಉಲ್ಲೇಖಿಸಲಾಗಿದೆ.
ಯಾರಾದರು ನಿಮ್ಮನ್ನು ಶ್ರೀ ವೆಂಕಟೇಶ್ವರ ಸ್ವಾಮಿ (ತಿರುಪತಿ ತಿರುಮಲ) ದೇವಸ್ಥಾನಕ್ಕೆ ಹೋಗಬೇಡಿ ಎಂದು ತಡೆದಿದ್ದಾರೆಯೇ, ಯಾರಾದರು ನಿಮಗೆ ನೋಟಿಸ್ ಕೊಟ್ಟಿದ್ದಾರಾ, ಕೊಟ್ಟಿದ್ದರೆ ನೋಟಿಸ್ ತೋರಿಸಿ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಜಗನ್‌ಗೆ ಸವಾಲು ಹಾಕಿದ್ದರು. ವಾಟ್ ಆರ್‌ಯು ಟಾಕಿಂಗ್ (ನೀನು ಏನು ಮಾತನಾಡುತ್ತಿದ್ದೀಯಾ) ಎಂದು ಅವರು ಪ್ರಶ್ನೆ ಮಾಡಿದ್ದರು.ಯಾರಾದರೂ ನಿಮ್ಮನ್ನು ತಡೆದಿದ್ದಾರೆಯೇ ಸುಳ್ಳು ಯಾಕೆ ಹೇಳುತ್ತೀರಿ ಎಂದು ಗರಂ ಆಗಿದ್ದರು. ಅದರ ಬೆನ್ನಲ್ಲೇ ಪೊಲೀಸರ ನೋಟಿಸ್ ವೈರಲ್ ಆಗಿದೆ.