ಕೊಯಮತ್ತೂರು
ತಮಿಳುನಾಡಿನ ಪ್ರಸಿದ್ಧ ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ ಅವರು ಆಧುನಿಕ ಕಾಲದ ಋಷಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಈಶಾ ಯೋಗ ಕೇಂದ್ರದ ಸಾಂಸ್ಕೃತಿಕ ಸಂಭ್ರಮದ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುತು ಜೊತೆಗೆ ಗೌರವ ಅತಿಥಿಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯಪಾಲ ರವೀಂದ್ರ ನಾರಾಯಣ ರವಿ, ತಮಿಳುನಾಡು ಐಟಿ ಸಚಿವ ಮನೋ ತಂಗರಾಜ್ ಟಿ ಕೂಡ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಬಗ್ಗೆ ಸಂತಸ ಹಂಚಿಕೊಂಡಿರುವ ಅವರು, ಆದಿಯೋಗಿಗಳ ಸಮ್ಮುಖದಲ್ಲಿ ಮಹಾಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಇಲ್ಲಿಗೆ ಬಂದಿರುವುದು ನನಗೆ ದೊಡ್ಡ ಆಶೀರ್ವಾದ. ಜೀವನದ ಉನ್ನತ ಆದರ್ಶಗಳನ್ನು ಹುಡುಕುತ್ತಿರುವವರಿಗೆ ಇಂದು ವಿಶೇಷವಾಗಿ ಮಹತ್ವದ ಸಂದರ್ಭ. ಮಹಾಶಿವರಾತ್ರಿಯ ರಾತ್ರಿ ಅಜ್ಞಾನದ ಕತ್ತಲೆಯ ಅಂತ್ಯ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
