ಶಿರಾ:
ಬೆಂಗಳೂರು ಜೈನ್ ಯೂನಿವರ್ಸಿಟಿಯಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಭಾರತದ ಸಂವಿಧಾನದ ಕತೃ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ತಿರುಚಿ ಬಿಯರ್ ಅಂಬೇಡ್ಕರ್ ಎಂದು ನಿಂದಿಸಿ ನಾಟಕ ಪ್ರದರ್ಶನ ಮಾಡಿದ ಜೈನ್ ಯೂನಿವರ್ಸಿಟಿಯನ್ನು ಪೂರ್ಣ ಮುಟ್ಟುಗೋಲು ಹಾಕಿ ವಜಾ ಮಾಡಬೇಕು ಎಂದು ಮಾನವ ಬಂಧುತ್ವ ವೇದಿಕೆ ಹಾಗೂ ಎಸ್.ಸಿ, ಎಸ್.ಟಿ. ಓಬಿಸಿ ಅಲ್ಪಸಂಖ್ಯಾತರ ಘಟಕಗಳು ಒತ್ತಾಯಿಸಿವೆ.
ಈ ಸಂಬAಧ ಸೋಮವಾರದಂದು ತಾಲೂಕು ಕಛೇರಿಯ ಮುಂದೆ ಪ್ರತಿಬಟನೆ ನಡೆಸಿದ ಮಾನವ ಬಂಧುತ್ವ ವೇದಿಕೆಯು ನಾಟಕ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳನ್ನು ಭಾರತದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿತಲ್ಲದೆ ಜೈನ್ ಯೂನಿವರ್ಸಿಟಿ ಮತ್ತು ವಿದ್ಯಾರ್ಥಿಗಳನ್ನು ದೇಶದ್ರೋಹಿಗಳು ಎಂದು ಪರಿಗಣಿಸಬೇಕು ಎಂದು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ನೀಡಿದ ಮನವಿಯಲ್ಲಿ ಒತ್ತಾಯಿಸಿದೆ.
ದಲಿತ ಮುಖಂಡ ಜೆ.ಎನ್.ರಾಜಸಿಂಹ ಮಾತನಾಡಿ ಜೈನ್ ಯೂನಿವರ್ಸಿಟಿ ಮಾಡಿರುವ ಈ ಅಪರಾಧ ಕ್ಷಮಿಸುವಂತಾದ್ದಲ್ಲ. ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಈ ಸಂಬಂಧ ದೂರು ದಾಖಲಾದರೂ ರಾಜ್ಯ ಸರ್ಕಾರ ಈ ಬಗ್ಗೆ ಮೀನಾ-ಮೇಷ ಎಣಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದರು.
ಸಿ ದಾಸಪ್ಪ, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಧರಣಿ ಕುಮಾರ್, ತಾ. ಸಂಚಾಲಕ ರಂಗರಾಜು, ನವೋದಯ ಯುವ ವೇದಿಕೆಯ ಜಯರಾಮ ಕೃಷ್ಣ, ಸೈಫ್ ಖಾನ್, ಲೋಕೇಶ್ದ, ನವೀನ್ ಬೌದ್ಧವಂಶಿ ಸೇರಿದಂತೆ ಅನೇಕ ಪ್ರಮುಖರು ಪ್ರತಿಭಟನೆಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
