ಮಧುರೈ
ಅವನಿಯಪುರಂನಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯ ವೇಳೆ ಎದೆಗೆ ಗೂಳಿ ತಿವಿದು ಗೂಳಿ ಹಿಡಿಯುವ ಯುವಕ ಸಾವನ್ನಪ್ಪಿದ್ದಾನೆ. ಇದು ಎಲ್ಲರನ್ನೂ ದುಃಖಿತರನ್ನಾಗಿ ಮಾಡಿದೆ.
ಮಧುರೈ ಅವನಿಯಪುರಂ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ನವೀನ್ ಕುಮಾರ್ ಎಂಬ ಆಟಗಾರ ಭಾಗವಹಿಸಿದ್ದರು. 9ನೇ ಸುತ್ತಿನಲ್ಲಿ ಅವರು ಮೈದಾನಕ್ಕೆ ಪ್ರವೇಶಿಸಿದಾಗ ಜಲ್ಲಿಕಟ್ಟು ಹೋರಿ ಅವರಿಗೆ ತಿವಿಯಿತು. ನವೀನ್ ಮೈದಾನದಲ್ಲಿ ಕುಸಿದು ಬಿದ್ದರು. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಾಜಾಜಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನವೀನ್ ಕುಮಾರ್ ಮೃತಪಟ್ಟಿದ್ದಾರೆ. ಮಗನ ಸಾವಿನಿಂದ ಪೋಷಕರು ಕಣ್ಣೀರಿಡುವಂತಾಗಿದೆ.
ತಮಿಳು ಜನರ ಸಾಂಪ್ರದಾಯಿಕ ಕ್ರೀಡೆಯಾದ ಜಲ್ಲಿಕಟ್ಟು ಸ್ಪರ್ಧೆಗಳನ್ನು ಪ್ರತಿ ವರ್ಷ ಪೊಂಗಲ್ ಹಬ್ಬದ ಸಮಯದಲ್ಲಿ ನಡೆಸಲಾಗುತ್ತದೆ. ಜಲ್ಲಿಕಟ್ಟು ಎಂದ ತಕ್ಷಣ ಜನರಿಗೆ ನೆನಪಿಗೆ ಬರುವ ಮೊದಲ ವಿಷಯವೆಂದರೆ ಅವನಿಯಪುರಂ, ಪಲಮೇಡು ಮತ್ತು ಅಲಂಗನಲ್ಲೂರು ಜಲ್ಲಿಕಟ್ಟು. ಮಧುರೈ ಜಿಲ್ಲೆಯ ಈ ಮೂರು ಸ್ಥಳಗಳಲ್ಲಿ ನಡೆಯುವ ಜಲ್ಲಿಕಟ್ಟು ಸ್ಪರ್ಧೆಗಳು ವಿಶ್ವಪ್ರಸಿದ್ಧವಾಗಿವೆ.
