73 ವರ್ಷದ ರಾಜ್ಯಪಾಲ್ಯರ ಫಿಟ್‌ನೆಸ್‌ ಕಂಡು ಬೆರಗಾದ ಜನ

ಚೆನ್ನೈ: 

    ಜೂನ್‌ 21 ರಂದು ಅಂತಾರಾಷ್ಟ್ರೀಯ ಯೋಗ  ದಿನವನ್ನು ಆಚರಿಸಲಾಗುತ್ತದೆ. ಇಂದು ದೇಶಾದ್ಯಂತ ಯೋಗ  ದಿನಾಚರಣೆ ಮಾಡಲಾಗಿದೆ. ಮಧುರೈನ ವೇಲಮ್ಮಳ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ತಮಿಳುನಾಡು ರಾಜ್ಯಪಾಲ ರವೀಂದ್ರ ನಾರಾಯಣ ರವಿ ಅವರ ಫಿಟ್‌ನೆಸ್‌ ನೋಡಿ ಎಲ್ಲರೂ ಬೆರಗಾಗಿದ್ದಾರೆ. ಕಾರ್ಯಕ್ರಮದಲ್ಲಿ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 73 ವರ್ಷದ ರಾಜ್ಯಪಾಲರು ಅದ್ಭುತ ಪ್ರದರ್ಶನ ನೀಡಿದರು.

   ಟ್ರ್ಯಾಕ್‌ಸೂಟ್ ಮತ್ತು ವೆಸ್ಟ್ ಧರಿಸಿ ಬಂದಿದ್ದ ರಾಜ್ಯಪಾಲರು ಯೋಗ ಮಾಡಿದ್ದಾರೆ. ಯೋಗ ಅವಧಿಯ ನಂತರ ಅವರು ಸತತ 51 ಪುಷ್-ಅಪ್‌ಗಳನ್ನು ಸಲೀಸಾಗಿ ಮಾಡಿದ್ದಾರೆ. ಅವರು ಪುಷ್‌ ಅಪ್‌ ಪೂರ್ಣಗೊಳಿಸಿದ ಬಳಿಕ ವಿದ್ಯಾರ್ಥಿಗಳು ಹರ್ಷೋದ್ಗಾರ ಮಾಡಿದರು. ರವೀಂದ್ರ ನಾರಾಯಣ ರವಿ ಅವರು ಈ ಹಿಂದೆ ಐಪಿಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

   ಅವರು ಪುಷಪ್‌ ಮಾಡುತ್ತಿದ್ದರೆ ಇವರಿಗೆ 70 ವರ್ಷವಾಗಿದೆಯೋ ಇಲ್ಲ 30 ಎಂದು ಜನ ಹೇಳಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ ಇವರು ಉತ್ತಮ ಉದಾಹರಣೆಯಾಗಿದ್ದಾರೆ. ನಿಯಮಿತ ಯೋಗಾಭ್ಯಾಸ ದೈಹಿಕ ಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

Recent Articles

spot_img

Related Stories

Share via
Copy link