ಬೆಂಗಳೂರು:
ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಯ ಕೊನೆಯ ಹಂತ ನಾಳೆಯಿಂದ ಆರಂಭವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಅಲ್ಪಸಂಖ್ಯಾತರ ತೃಷ್ಠೀಕರಣ ಪರಿಶಿಷ್ಟ ಸಮುದಾಯದ ಅನುದಾನ ದುರ್ಬಳಕೆ ವಿರೋಧಿಸಿ ನಾಳೆ ಬೆಳಗ್ಗೆ ಕೋಲಾರದಲ್ಲಿ ಯಾತ್ರೆ ಆರಂಭವಾಗಲಿದ್ದು, ಮೇ 8ರಂದು ತುಮಕೂರು, ಚಿತ್ರದುರ್ಗ, ಮೇ 9ರಂದು ಬಳ್ಳಾರಿ, ವಿಜಯನಗರ, ಮೇ 10ರಂದು ಚಿಕ್ಕಬಳ್ಳಾಪುರ ಹಾಗೂ ಮೇ 11ರಂದು ಹುಬ್ಬಳ್ಳಿಯಲ್ಲಿ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.
