ಕಂಗನಾಗೆ ಯೋಧೆಯಿಂದ ಕಪಾಳ ಮೋಕ್ಷ…..!

ಮಂಡಿ

       ಲೋಕಸಭಾ ಸಂಸದೆ ಕಂಗನಾ ರನೌತ್ ಅವರೊಂದಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ. ಕಂಗನಾಗೆ ಸಿಐಎಸ್ಎಫ್ ಮಹಿಳಾ ಯೋಧೆ ಕಪಾಳಕ್ಕೆ ಹೊಡೆದಿದ್ದು ವಿಡಿಯೋ ವೈರಲ್ ಆಗಿದೆ.

    ರೈತ ಚಳವಳಿಯಲ್ಲಿ ರೈತ ಮಹಿಳೆಯರ ಬಗ್ಗೆ ಕಂಗನಾ ಹೇಳಿಕೆ ನೀಡಿದ್ದರು. ಇದರಿಂದ ಮನನೊಂದ ಸಿಐಎಸ್‌ಎಫ್ ಮಹಿಳಾ ಯೋಧ ಕುಲ್ವಿಂದರ್ ಕೌರ್ ಕಂಗನಾಗೆ ಕಪಾಳಮೋಕ್ಷ ಮಾಡಿದ್ದು ಈ ಸಂಬಂಧ ಯೋಧೆ ಕುಲ್ವಿಂದರ್ ನನ್ನು ವಶಕ್ಕೆ ಪಡೆಯಲಾಗಿದೆ. 

   ಲೋಕಸಭಾ ಸಂಸದೆ ಕಂಗನಾ ರನೌತ್ ಅವರೊಂದಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ. ಕಂಗನಾಗೆ ಸಿಐಎಸ್ಎಫ್ ಮಹಿಳಾ ಯೋಧೆ ಕಪಾಳಕ್ಕೆ ಹೊಡೆದಿದ್ದು ವಿಡಿಯೋ ವೈರಲ್ ಆಗಿದೆ.

    ರೈತರ ಸಮಸ್ಯೆಗೆ ಸಂಬಂಧಿಸಿದಂತೆ ಕೌರ್ ಮತ್ತು ಕಂಗನಾ ನಡುವೆ ವಾಗ್ವಾದ ನಡೆದಾಗ ಪರಿಶೀಲನೆಯ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ರೈತರ ಪ್ರತಿಭಟನೆಯ ಕುರಿತು ಕಂಗನಾ ಹೇಳಿಕೆಯಿಂದ ಅಸಮಾಧಾನಗೊಂಡ ಕೌರ್, ನಂತರ ಆಕೆಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ. ನಂತರ, ಕಂಗನಾ ಜೊತೆ ಪ್ರಯಾಣಿಸುತ್ತಿದ್ದ ಆಪ್ತ ಸಹಾಯಕ ಕೌರ್ ಅವರಿಗೆ ಕಪಾಳಮೋಕ್ಷ ಮಾಡಲು ಪ್ರಯತ್ನಿಸಿದರು. ಸದ್ಯ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದ್ದು ಘಟನೆಯ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

      ಕಂಗನಾ ಗೃಹ ಸಚಿವಾಲಯಕ್ಕೆ ದೂರು ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಘಟನೆಯ ನಂತರ ಆಕೆ ದೆಹಲಿಗೆ ತೆರಳಿದ್ದಳು. ದೆಹಲಿಗೆ ಬಂದಿಳಿದ ನಂತರ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ‘ಪಂಜಾಬ್‌ನಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರದಲ್ಲಿ ಆಘಾತಕಾರಿ ಏರಿಕೆ’ ಎಂಬ ಶೀರ್ಷಿಕೆ ನೀಡಿ ವೀಡಿಯೊ ಮಾಡಿದ್ದಾರೆ. ನಾನು ಸುರಕ್ಷಿತವಾಗಿದ್ದು ಉತ್ತಮವಾಗಿದ್ದೇನೆ. ಆದರೆ ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾಳೆ. 

     CISF ಮಹಿಳಾ ಯೋಧೆ ನನ್ನ ಕಡೆ ಬಂದು ನನ್ನ ಮುಖಕ್ಕೆ ಹೊಡೆದು ನನ್ನನ್ನು ನಿಂದಿಸಲು ಪ್ರಾರಂಭಿಸಿದಳು. ನಾನು ಅವಳನ್ನು ಯಾಕೆ ಹೀಗೆ ಮಾಡಿದೆ ಎಂದು ಕೇಳಿದೆ. ಅದಕ್ಕೆ ಆಕೆ ರೈತರ ಪ್ರತಿಭಟನೆಯನ್ನು ಬೆಂಬಲಿಸಿದಿ ಹೊಡೆದಿದ್ದಾಗಿ ಹೇಳಿದಳು ಎಂದು ನಟಿ ಹೇಳಿದ್ದಾರೆ.

      ಏತನ್ಮಧ್ಯೆ, ಹಿರಿಯ ಸಿಐಎಸ್ಎಫ್ ಅಧಿಕಾರಿಗಳನ್ನು ಒಳಗೊಂಡ ತನಿಖಾ ಸಮಿತಿಯನ್ನು ರಚಿಸಲಾಗಿದೆ. ರೈತರ ಪ್ರತಿಭಟನೆಯಲ್ಲಿ ತಮ್ಮ ತಾಯಿಯೂ ಭಾಗವಹಿಸುತ್ತಿದ್ದಾರೆ ಎಂದು ಕೌರ್ ಹೇಳುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ. ರೈತರ ಆಂದೋಲನದ ಸಂದರ್ಭದಲ್ಲಿ ಪಂಜಾಬ್‌ನ ಮಹಿಳೆಯರ ಬಗ್ಗೆ ಕಂಗನಾ ಅನುಚಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಕಾನ್‌ಸ್ಟೆಬಲ್ ವಿಚಾರಣೆಯ ಸಮಯದಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

Recent Articles

spot_img

Related Stories

Share via
Copy link
Powered by Social Snap