ಜನೌಷಧಿ ಕೇಂದ್ರಗಳಿಗೆ ಶಕ್ತಿ ತುಂಬಿದ ಕರ್ನಾಟಕ, ಕೇರಳ, ತಮಿಳುನಾಡು!

ಮಂಗಳೂರು:

     ದಕ್ಷಿಣ ರಾಜ್ಯಗಳು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆಯ ಪರಿಣಾಮಕಾರಿಯಾಗಿ ಬೆಳವಣಿಗೆ ಸಾಧಿಸುತ್ತಿದೆ. ಆದರೆ ಇತರ ರಾಜ್ಯಗಳು ಗಮನಾರ್ಹವಾಗಿ ಕಡಿಮೆ ವ್ಯಾಪಾರ ಕಾರ್ಯಕ್ಷಮತೆಯನ್ನು ತೋರಿಸುತ್ತವೆ. ಇದರಿಂದ ಕೈಗೆಟುಕುವ ಜೆನೆರಿಕ್ ಔಷಧಿಗಳ ಲಭ್ಯತೆ ಮತ್ತು ಬಳಕೆಯಲ್ಲಿ ದೇಶದಲ್ಲಿ ಮಿಶ್ರ ಪ್ರತಿಕ್ರೆಯ ವ್ಯಕ್ತವಾಗುತ್ತಿದೆ.

    ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಜನೌಷಧಿ ಕೇಂದ್ರ ಸಾಂದ್ರತೆ ಮತ್ತು ವ್ಯವಹಾರದ ಪ್ರಮಾಣದಲ್ಲಿ ಮುಂಚೂಣಿಯಲ್ಲಿವೆ. ಆದರೆ ಮಧ್ಯಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳು ಜನಸಂಖ್ಯಾ ಅಥವಾ ಆರ್ಥಿಕ ಬಲದ ಹೊರತಾಗಿಯೂ ಹಿಂದುಳಿದಿವೆ.

   ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದ ಒಟ್ಟು 17,610 ಕೇಂದ್ರಗಳಲ್ಲಿ ದಕ್ಷಿಣದ ಐದು ರಾಜ್ಯಗಳು 5,196 ಕೇಂದ್ರಗಳನ್ನು ಹೊಂದಿವೆ. ಇದು ರಾಷ್ಟ್ರೀಯ ಒಟ್ಟು ಮೊತ್ತದ ಸುಮಾರು ಶೇ. 30 ರಷ್ಟಿದೆ ಮತ್ತು ಇತ್ತೀಚಿನ ಹಣಕಾಸು ವರ್ಷದಲ್ಲಿ ದೇಶದ ವ್ಯವಹಾರದ ಪರಿಮಾಣದ ಮೂರನೇ ಒಂದು ಭಾಗದಷ್ಟು ಕೊಡುಗೆ ನೀಡುತ್ತಿವೆ. 1,543 ಕೇಂದ್ರಗಳನ್ನು ಹೊಂದಿರುವ ಕರ್ನಾಟಕ 2020-21ರಲ್ಲಿ 148.56 ಕೋಟಿ ರೂ.ಗಳಿಂದ 2024-25ರಲ್ಲಿ 222.85 ಕೋಟಿ ರೂ.ವಹಿವಾಟು ನಡೆದಿದ್ದು, ಭಾರೀ ಪ್ರಮಾಣದಲ್ಲಿ ಹೆಚ್ಚಳವನ್ನು ತೋರಿಸಿದೆ. ಇದೇ ಅವಧಿಯಲ್ಲಿ ಕೇರಳವು 107.49 ಕೋಟಿ ರೂ.ಗಳಿಂದ 264.37 ಕೋಟಿ ರೂ.ಗಳಿಗೆ ವಿಸ್ತರಿಸಿದೆ. ತಮಿಳುನಾಡು ಸ್ಥಿರವಾದ ಲಾಭವನ್ನು ದಾಖಲಿಸಿದ್ದು, ಮಾರಾಟವು 51.48 ಕೋಟಿ ರೂ.ಗಳಿಂದ 180.35 ಕೋಟಿ ರೂ.ಗಳಿಗೆ ಏರಿದೆ.

   ಕಡಿಮೆ ಕಾರ್ಯಕ್ಷಮತೆ ಹೊಂದಿರುವ ದೊಡ್ಡ ರಾಜ್ಯಗಳ ಜೊತೆಗೆ ಹೋಲಿಸಿದಾಗ ಈ ವ್ಯತ್ಯಾಸ ಇನ್ನಷ್ಟು ತೀಕ್ಷ್ಣವಾಗುತ್ತದೆ. 597 ಕೇಂದ್ರಗಳನ್ನು ಹೊಂದಿರುವ ಮಧ್ಯಪ್ರದೇಶವು 2020-21ರಲ್ಲಿ 7.23 ಕೋಟಿ ರೂ.ಗಳಿಂದ 2024-25ರಲ್ಲಿ ಕೇವಲ 2.64 ಕೋಟಿ ರೂ.ಗಳಿಗೆ ಮಾರಾಟ ಕುಸಿದಿದೆ. ದೇಶದಲ್ಲಿ ನಾಲ್ಕನೇ ಅತಿ ಹೆಚ್ಚು ಕೇಂದ್ರಗಳನ್ನು ಹೊಂದಿರುವ ಬಿಹಾರದಲ್ಲಿ ಮಾರಾಟವು 2023-24ರಲ್ಲಿ ಗರಿಷ್ಠ ಮಟ್ಟವನ್ನು ತಲುಪಿತ್ತು. ಆದರೆ 2024-25ರಲ್ಲಿ 6.06 ಕೋಟಿ ರೂ.ಗಳಿಗೆ ಇಳಿಯಿತು. ಇದು ಇಷ್ಟು ದೊಡ್ಡ ಜನಸಂಖ್ಯೆಗೆ ಸಾಧಾರಣ ಅಂಕಿ ಅಂಶವಾಗಿದೆ. ಐದು ವರ್ಷಗಳಲ್ಲಿ ಮಹಾರಾಷ್ಟ್ರವು 8.35 ಕೋಟಿ ರೂ.ಗಳಿಂದ 26.54 ಕೋಟಿ ರೂ.ಗಳಿಗೆ ಬೆಳವಣಿಗೆ ದಾಖಲಿಸಿದೆ.

Recent Articles

spot_img

Related Stories

Share via
Copy link