ಗದಗ:
ಕುರಿಗಳನ್ನು ಕಳ್ಳತನ ಮಾಡಲು ಹೊಂಚುಹಾಕಿದ್ದ ನಾಲ್ವರು ಯುವಕರನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.
ಕಳ್ಳತನ ಮಾಡುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ ರನ್ನು ಸ್ಥಳೀಯರು
ಅರೆಬೆತ್ತಲೆಗೊಳಿಸಿ ಥಳಿಸಿ, ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗದಗನ ಸೆಟಲ್ಮೆಂಟ್ ನಿವಾಸಿಗಳಾದ ಶ್ರೀಕಾಂತ್, ವಿಕಾಸ್ ಸೇರಿ ನಾಲ್ವರು ಬಂಧಿತ ಕಳ್ಳರು. ಬಂಧಿತರು ಓರ್ವ ಬಾಲಕನನ್ನು ಸೇರಿಸಿಕೊಂಡು ಗುಂಪೊಂದು ಕಟ್ಟಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಬಂಧಿತರು ಕುರಿಗಳನ್ನು ಕಳವು ಮಾಡಿ ಗದಗನಿಂದ ಮಹಾರಾಷ್ಟ್ರ ದ ಕೊಲ್ಹಾಪುರ ಹಾಗೂ ಸೊಲ್ಲಾಪುರಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ