ಬಿಜೆಪಿ ಶಾಸಕನಿಗೆ ತಿರುಗೇಟು ನೀಡಿದ ಜಾರಕೀಹೋಳಿ

ಬೆಳಗಾವಿ:

     ಬೆಳಗಾವಿ ಮತ್ತೊಂದು ಬಿಹಾರವಾಗಿದೆ ಎಂಬ ಬಿಜೆಪಿ ಶಾಸಕ ಅಭಯ ಪಾಟೀಲ (ಬೆಳಗಾವಿ ದಕ್ಷಿಣ ಕ್ಷೇತ್ರ) ಹೇಳಿಕೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವ್ಯಕ್ತಿಯೊಬ್ಬರು ರಸ್ತೆಗಳಲ್ಲಿನ ಗುಂಡಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಆ ವೇಳೆ ಶಾಸಕ ಅಭಯ ಪಾಟೀಲ್ ಅಟ್ರಾಸಿಟಿ ಕೇಸ್ ದಾಖಲಿಸಿದ್ದರು, ಆಗ ಬೆಳಗಾವಿ ರಾಜಸ್ತಾನವಾಗಿತ್ತೆ ಎಂದು ಪ್ರಶ್ನಿಸಿದ್ದಾರೆ.

    ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶಾಸಕ ಪಾಟೀಲ್ ಬೆಳಗಾವಿಯಲ್ಲಿ ಹಲವು ಜನರೊಂದಿಗೆ ಮಾಡಿದ್ದನ್ನು ಸ್ಮರಿಸಿದರು. ಈಗ ಏಕಾಏಕಿ ಬೆಳಗಾವಿ ಬಿಹಾರ ಆಗಿದ್ದು ಹೇಗೆ, ಬಿಜೆಪಿ ಕಾರ್ಪೋರೇಟರ್ ಅಭಿಜಿತ್ ಜವಾಲ್ಕರ್ ಮತ್ತು ಸ್ಥಳೀಯ ನಿವಾಸಿ ರಮೇಶ್ ಪಾಟೀಲ್ ನಡುವೆ ಇತ್ತೀಚೆಗೆ ನಡೆದ ಘರ್ಷಣೆಯ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದರು.ಪೊಲೀಸ್ ಇಲಾಖೆ ಮೇಲೆ ಒತ್ತಡ ಹೇರಲು ಟಿಳಕವಾಡಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಯಿತು, ಆದರೆ ರಾಜಕೀಯಕ್ಕೆ ಜಾಗವಿಲ್ಲ, ಏಕೆಂದರೆ ಪೊಲೀಸರು ತಪ್ಪಿತಸ್ಥರನ್ನು ದೃಢವಾಗಿ ನಿಭಾಯಿಸುತ್ತಾರೆ ಎಂದು ಜಾರಕಿಹೊಳಿ ಹೇಳಿದರು.

    ಆಸ್ಪತ್ರೆಯಿಂದ ಬಿಡುಗಡೆಯಾಗುವ ಮುನ್ನವೇ ಜವಾಲ್ಕರ್ ಅವರನ್ನು ಬಂಧಿಸಲಾಗಿದೆ ಎಂಬ ಬಿಜೆಪಿ ಕಾರ್ಪೊರೇಟರ್‌ಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿಕೃತವಾಗಿ ಡಿಸ್ಚಾರ್ಜ್ ಆದ ನಂತರ ಕಾರ್ಪೊರೇಟರ್ ಅವರನ್ನು ಬಂಧಿಸಲಾಗಿದೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಪೊಲೀಸರ ಬಳಿ ಇವೆ ಎಂದಿದ್ದಾರೆ.

    ಈಗ ನ್ಯಾಯಾಲಯ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುತ್ತದೆ. ಮೊಬೈಲ್ ಟವರ್ ಲೊಕೇಶನ್ ವಿಚಾರವಾಗಿ ಇಬ್ಬರ ನಡುವಿನ ವೈಯುಕ್ತಿಕ ವಿವಾದ ಇದಾಗಿದ್ದು, ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದತ್ತ ಬೊಟ್ಟು ಮಾಡಲು ಯತ್ನಿಸುತ್ತಿದ್ದಾರೆ ಎಂದರು.

   ಬೆಳಗಾವಿಯ ಸರ್ಕಾರದ ಖೌ ಕಟ್ಟಾ ಕಾಂಪ್ಲೆಕ್ಸ್‌ನಲ್ಲಿ ಬಿಜೆಪಿ ಕಾರ್ಪೊರೇಟರ್‌ನ ಪತ್ನಿಯ ಹೆಸರಿನಲ್ಲಿ ಮಳಿಗೆಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

    ಖೌ ಕಟ್ಟಾದಲ್ಲಿನ ಔಟ್‌ಲೆಟ್‌ಗಳು ಬಡವರು, ಎಸ್‌ಸಿ/ಎಸ್‌ಟಿಗಳು ಮತ್ತು ದೈಹಿಕವಾಗಿ ವಿಕಲಚೇತನರಿಗೆ ಮೀಸಲಾಗಿದ್ದವು ಆದರೆ ಐಷಾರಾಮಿ ಕಾರುಗಳು, ಆಭರಣ ಅಂಗಡಿಗಳು ಮತ್ತು ದೊಡ್ಡ ಬಂಗ್ಲೆಗಳನ್ನು ಹೊಂದಿರುವವರಿಗೆ ಹಂಚಿಕೆ ಮಾಡಲಾಗಿದೆ. ಇಲ್ಲಿ ಮಳಿಗೆಗಳ ಹಂಚಿಕೆ ಸಮಯದಲ್ಲಿ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ.  ಬಿಜೆಪಿ ಅನುಯಾಯಿಗಳು, ಪಕ್ಷದ ಕಾರ್ಯಕರ್ತರಿಗೆ ಹಂಚಿಕೆ ಮಾಡಲಾಗಿದೆ. ತನಿಖೆಯ ನಂತರ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap