ರೆಡ್ಡಿಹಳ್ಳಿ ಗ್ರಾಮದಲ್ಲಿ ಜಾತಿಗಣತಿಗೆ ಚಾಲನೆ

ನಾಯಕನಹಟ್ಟಿ :

   ನಾಯಕನಹಟ್ಟಿ ಸಮೀಪದ ತಳಕು ಹೋಬಳಿಯ ಗಡಿ ಭಾಗದ ಬೇಡ ರೆಡ್ಡಿಹಳ್ಳಿ ಗ್ರಾಮದಲ್ಲಿ ಜಾತಿಗಣತಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರುಒಳ ಮೀಸಲಾತಿ ಸಂಬಂಧಿಸಿದಂತೆ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಮಾದಿಗ ಸಮುದಾಯದ ವರು ಕ್ರಮ ಸಂಖ್ಯೆ 61 ರಲ್ಲಿ ಮಾದಿಗ ಅಂತ ಸ್ವಾಭಿಮಾನದಿಂದ ಬರೆಸಬೇಕು ಎಂದು ಮನವಿ ಮಾಡಿಕೊಂಡರು.ಆದಿ ದ್ರಾವಿಡ, ಆದಿ ಕರ್ನಾಟಕ ಎಸ್ ಸಿ ಹರಿಜನ, ಆದಿ ಆಂಧ್ರ ಬರೆಸಬೇಡಿ ಎಂದು ತಿಳಿಸಿದರು.

   ಹಬ್ಬದ ಹರಿದಿನ ಜಾತ್ರೆಯ ಜಯಂತಿ ಆಚರಣೆ ಮದುವೆ ಸಮಾರಂಭಗಳು ಕೈ ಬಿಟ್ಟು ಜಾತಿಗಣತಿಯತ್ತ ಗಮನ ಹರಿಸಬೇಕು ಎಂದು ತಿಳಿಸಿದರು.ಪರಿಶಿಷ್ಟ ಜಾತಿಗಳ ಉಪಜಾತಿಗಳ ದತ್ತಾಂಶ ಸಂಗ್ರಹ ಕಾರ್ಯವು ಮೇ 5ರಿಂದ ಮೇ 17ರವರೆಗೂ ಮೊದಲನೇ ಸಮೀಕ್ಷೆಯಲ್ಲಿಮಾದಿಗ ಅಂತ ಹೆಸರನ್ನು ಸ್ಪಷ್ಟವಾಗಿ ಹೇಳಬೇಕು ಎಂದರು.ಯಾವುದೇ ಮುಜುಗರಕ್ಕೆ ಒಳಗಾಗದೆ ಹಿಂಜರಿಯದೆ ನಾಚಿಕೆ ಪಟ್ಟಿಕೊಳ್ಳದೇ ಮೂಲ ಜಾತಿ ಮಾದಿಗ ಎಂದು ನಮೂದಿಸಬೇಕು ಎಂದು ಅವರು ಮಾತನಾಡಿದರು

ಒಳ ಮೀಸಲಾತಿ ಜಾರಿಗಾಗಿ ಸಮೀಕ್ಷೆ ಗಾಗಿ ನಿಮ್ಮ ಮನೆಗೆ ಮನೆಗೆ ಬರುವ ಅಧಿಕಾರಿಗಳು ಬಂದಾಗ ಮಾದಿಗ ಎಂದು ಹೆಮ್ಮೆಯಿಂದ ಬರಿಸಬೇಕು – ಕೆಪಿಸಿಸಿ ರಾಜ್ಯ ಸಂಚಾಲಕರಾದ ಹಿರೇಹಳ್ಳಿ ಮಲ್ಲೇಶ್ 

Recent Articles

spot_img

Related Stories

Share via
Copy link