ಕೊರಟಗೆರೆ :
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿಗೆ ಸದಸ್ಯರ ಒಪ್ಪಿಗೆಯಂತೆ ಸಿ.ಡಿ ಪ್ರಭಾಕರ್ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷೆ ಪುಷ್ಪ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ತಾ.ಪಂ ಇ ಓ ಅಪೂರ್ವ ಕಾರ್ಯನಿರ್ವಹಿಸಿದ್ದು ಸರ್ವ ಸದಸ್ಯರ ಒಪ್ಪಿಗೆಯಂತೆ ಸಿ.ಡಿ ಪ್ರಭಾಕರ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಘೋಷಣೆ ಮಾಡಿದ್ದು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ನೂತನ ಅಧ್ಯಕ್ಷರಿಗೆ ಶುಭಕೋರಿದರು.
ನೂತನ ಅಧ್ಯಕ್ಷ ಸಿ.ಡಿ ಪ್ರಭಾಕರ್ ಮಾತನಾಡಿ, ಗೃಹ ಸಚಿವರ ಆಶೀರ್ವಾದದಿಂದ ಅಧ್ಯಕ್ಷ ಸ್ಥಾನಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿ ಆಯ್ಕೆ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸವಲತ್ತುಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಸಿಗುವಂತೆ ಮಾಡುವುದರ ಜೊತೆಗೆ ಗ್ರಾಮಗಳನ್ನು ಅಭಿವೃದ್ಧಿ ಪಡಿಸಿ ಮಾದರಿ ಗ್ರಾ.ಪಂಯನ್ನಾಗಿ ಮಾಡುವುದೇ ನನ್ನ ಪ್ರಮುಖ ಗುರಿ. ಆಯ್ಕೆ ಮಾಡಿದ ಸದಸ್ಯರಿಗೂ ಹಾಗೂ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಪ್ರೀತಿ ವಿಶ್ವಾಸಕ್ಕೆ ಅಭಾರಿಯಾಗಿರುತ್ತೇನೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, ಪಕ್ಷಾತೀತವಾಗಿ ಗ್ರಾ.ಪಂ ಸದಸ್ಯರು ಸಿ.ಡಿ ಪ್ರಭಾಕರ್ ಅವರನ್ನು ಆಯ್ಕೆ ಮಾಡಿದ್ದಾರೆ. ಗೃಹ ಸಚಿವರ ಮಾರ್ಗದರ್ಶನದೊಂದಿಗೆ ನೂತನ ಅಧ್ಯಕ್ಷರು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು. ಪಕ್ಷಾತೀತವಾಗಿ ಅಭಿವೃದ್ದಿಗೆ ಕೈ ಜೋಡಿಸಿದಾಗ ರಾಜ್ಯದಲ್ಲಿಯೇ ಕೊರಟಗೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಕಾಣಬಹುದು ಎಂದು ಹೇಳಿದರು.
ಗ್ರಾ.ಪಂ ಸದಸ್ಯ ಕೋಕಿಲ ಸಂದೀಪ್ ಮಾತನಾಡಿ, ಅಧ್ಯಕ್ಷ ಚುನಾವಣೆಯಿಂದ ಗ್ರಾ.ಪಂಚಾಯ್ತಿನಲ್ಲಿ ಹಬ್ಬದ ಸಡಗರ ಮನೆ ಮಾಡಿದೆ. ಮರು ಅಧ್ಯಕ್ಷರ ಚುನಾವಣೆಯಲ್ಲಿ ಸಿ.ಡಿ ಪ್ರಭಾಕರ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಪ್ರತಿ ಗ್ರಾ.ಪಂ ನಲ್ಲಿ ಅಧ್ಯಕ್ಷರ ಚುನಾವಣೆಗಳು ಸದಸ್ಯರ ಒಮ್ಮತದಿಂದಲೇ ನಡೆದಾಗ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ಕೆ.ಎಲ್.ಮಂಜು, ಮಾರುತಿ,ಕರಿಯಣ್ಣ, ನರಸಿಂಹಮೂರ್ತಿ,ಕೋಕಿಲ್ ಸಂದೀಪ್,ಪುಷ್ಪ,ರಾಗಿಣಿ,ರತ್ನಮ್ಮ, ಲಕ್ಷ್ಮಿದೇವಮ್ಮ,ಕೊರಟಗೆರೆ ಪ.ಪಂ ಸದಸ್ಯ ಕೆ.ಆರ್ ಓಬಳರಾಜು, ಹಂಚಿಹಳ್ಳಿ ಗ್ರಾ.ಪಂ ಅಧ್ಯಕ್ಷ ಭೀಮರಾಜು,ಯುವ ಘಟಕ ಅಧ್ಯಕ್ಷ ವಿನಯ್‌ಕುಮಾರ್, ಮುಖಂಡರಾದ (ಮೀನು) ಮಂಜಣ್ಣ,ಕಾರ್ ಮಹೇಶ್, ರವಿಕುಮಾರ್,ರಮೇಶ್, ಮಂಜುನಾಥ್,ರಂಗರಾಜು, ಹನುಮಂತರಾಜು ಸೇರಿದಂತೆ ಇತರರು ಇದ್ದರು.
