ಪಾಕ್‌ ಸ್ವಾತಂತ್ರ್ಯೋತ್ಸವಕ್ಕೆ ವಿಶ್‌ ಮಾಡಿ; ಜಾವೇದ್‌ ಅಖ್ತರ್‌ ಟ್ರೋಲ್‌

ಮುಂಬೈ: 

    79ನೇ ಸ್ವಾತಂತ್ರ್ಯ ದಿನಾಚರಣೆಯಂದು, ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್  ಎಕ್ಸ್‌ನಲ್ಲಿ, ತಮ್ಮ ಶುಭಾಶಯಗಳನ್ನು ತಿಳಿಸಿದ್ದರು. ಸ್ವಾತಂತ್ರ್ಯವನ್ನು ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಅಪಾರ ತ್ಯಾಗಗಳ ಮೂಲಕ ಗಳಿಸಿದ್ದಾರೆ, ಸರಳವಾಗಿ ನೀಡಲಾಗಿಲ್ಲ ಎಂದು ಅವರು ಬರೆದುಕೊಂಡಿದ್ದರು. ಆದರೆ ಅದಕ್ಕೆ ಬಂದಿರುವ ಕಮೆಂಟ್‌ ನೋಡಿ ಜಾವೇದ್ ಅಖ್ತರ್ ನೆಟ್ಟಿಗರ ವಿರುದ್ಧ ಕಿಡಿ ಕಾರಿದ್ದಾರೆ. ಜಾವೇದ್‌ ಅಖ್ತರ್ ಅವರಿಗೆ ನೆಟ್ಟಿಗರು ಭಾರತದ ಸ್ವಾತಂತ್ರ್ಯ ದಿನಾಚರಣೆಗಲ್ಲ, ನೀವು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಬೇಕು ಎಂದು ಹೇಳಿದ್ದರು. ಇದರಿಂದ ಅಖ್ತರ್ ಸಿಟ್ಟಿಗೆದಿದ್ದಾರೆ.

    ನನ್ನ ಎಲ್ಲಾ ಭಾರತೀಯ ಸಹೋದರ ಸಹೋದರಿಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಈ ಸ್ವಾತಂತ್ರ್ಯವನ್ನು ನಮಗೆ ತಟ್ಟೆಯಲ್ಲಿ ನೀಡಲಾಗಿಲ್ಲ ಎಂಬುದನ್ನು ಮರೆಯಬಾರದು. ಇಂದು ನಾವು ನಮಗೆ ಆಜಾದಿಯನ್ನು ನೀಡಿದ್ದಕ್ಕಾಗಿ ಜೈಲುಗಳಿಗೆ ಮತ್ತು ಗಲ್ಲು ಶಿಕ್ಷೆಗೆ ಗುರಿಯಾದವರನ್ನು ನೆನಪಿಸಿಕೊಳ್ಳಬೇಕು ಮತ್ತು ಅವರಿಗೆ ನಮಸ್ಕರಿಸಬೇಕು. ಈ ಅಮೂಲ್ಯ ಉಡುಗೊರೆಯನ್ನು ನಾವು ಎಂದಿಗೂ ಕಳೆದುಕೊಳ್ಳದಂತೆ ನೋಡಿಕೊಳ್ಳೋಣ” ಎಂದು ಬರೆದಿದ್ದರು. ಸ್ವಲ್ಪ ಸಮಯದ ನಂತರ, ನೀವು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಬೇಕು ಎಂದು ಕಮೆಂಟ್‌ಗಳು ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಅಪ್ಪ ಅಮ್ಮ ಬ್ರಿಟಿಷರ ಬಳಿ ಬೇಡುತ್ತಿದ್ದಾಗ, ನನ್ನ ಪೂರ್ವಜರು, ಕಾಲಾ ಪಾನಿಯಲ್ಲಿ ಸಾಯುತ್ತಿದ್ದರು ಎಂದು ಬರೆದಿದ್ದಾರೆ. 

    ಜಾವೇದ್ ಅಖ್ತರ್ ಅವರ ಮುತ್ತಜ್ಜ ಫಜಲ್-ಎ-ಹಕ್ ಖೈರಾಬಾದಿ  ಒಬ್ಬ ವಿಶಿಷ್ಟ ಭಾರತೀಯ ಇಸ್ಲಾಮಿಕ್ ವಿದ್ವಾಂಸ, ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು, ಅವರು ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸಿದರು ಮತ್ತು 1857 ರ ಭಾರತೀಯ ದಂಗೆಯನ್ನು ಫತ್ವಾ ಮೂಲಕ ಬೆಂಬಲಿಸಿದರು, ಇದರಿಂದಾಗಿ ಅವರು ಅಂಡಮಾನ್ ದ್ವೀಪಗಳಿಗೆ ಗಡಿಪಾರು ಮಾಡಲ್ಪಟ್ಟರು, ಅಲ್ಲಿ ಅವರು ನಿಧನರಾದರು. ಅವರ ತಂದೆಯ ಅಜ್ಜ ಮುಜ್ತಾರ್ ಖೈರಾಬಾದಿ ಮತ್ತು ತಂದೆ ಜಾನ್ ನಿಸಾರ್ ಅಖ್ತರ್ ಕೂಡ ಸ್ವಾತಂತ್ರ್ಯ, ಪ್ರತಿರೋಧ ಮತ್ತು ಸಾಮಾಜಿಕ ನ್ಯಾಯದ ಕುರಿತಾದ ಕೃತಿಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಕವಿಗಳಾಗಿದ್ದರು.

Recent Articles

spot_img

Related Stories

Share via
Copy link