ಕೊಳಾಳು : ಡಾ|| ಬಿ. ಆರ್ ಅಂಬೇಡ್ಕರ್ ಹಾಗೂ ವಿಶ್ವ ಗುರು ಬಸವಣ್ಣ ರವರ ಜಯಂತಿ ಆಚರಣೆ

ಕೊಳಾಳು

     ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ|| ಬಿ. ಆರ್ ಅಂಬೇಡ್ಕರ್ ಹಾಗೂ ವಿಶ್ವ ಗುರು ಬಸವಣ್ಣ ರವರ ಜಯಂತಿ ಆಚರಣೆ ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕ್ ತೆಕಲ ವಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಾಳು ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಜಗಜ್ಯೋತಿ ಬಸವೇಶ್ವರ ಹಾಗೂ ಜ್ಞಾನ ಜ್ಯೋತಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಜಯಂತಿಯನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

    ಕಾಲೋನಿಯ ಎಲ್ಲೆಡೆ ನೀಲಿ ಬಾವುಟಗಳ ಹಾರಾಟ ಯುವಕರ ಉತ್ಸಾಹ ಹೆಚ್ಚು ಮಾಡಿ ಹಬ್ಬದ ವಾತಾವರಣ ಸೃಷ್ಟಿ ಮಾಡಿತ್ತು ಎಲ್ಲಾ ಸಮುದಾಯದ ಮುಖಂಡರ ಸಮ್ಮುಖದಲ್ಲೇ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆಗೊಂಡ ಕಾರ್ಯಕ್ರಮ ಮಳೆರಾಯನ ಅಭಿಷೇಕದೊಂದಿಗೆ ರಥವೇರಿದ ಮಹಾನಾಯಕ ಯುವಕರ ಹರ್ಷೋದ್ಗಾರ ದೊಂದಿಗೆ ರಾರಾಜಿಸಿದ ಮಹಾ ನಾಯಕ ಕ್ರಾಂತಿ ಪುರುಷ ಬಸವಣ್ಣ ಭಾವಚಿತ್ರಗಳು ಮೆರವಣಿಗೆ ಯಲ್ಲಿ ಡಿ ಜೆ ಶಬ್ದಕ್ಕೆ ಹೆಜ್ಜೆ ಹಾಕಿದ ಮಹಿಳಾ ಮಣಿ ಗಳು ಯುವಕರು ಶಿಳ್ಳೆ ಚಪ್ಪಾಳೆ ಮುಗಿಲು ಮುಟ್ಟಿತು.

    ಕಾರ್ಯಕ್ರಮದಲ್ಲಿ ಜನಪ್ರಿಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ರಾದ ಕಿರಣ್ ಕುಮಾರ್ ಯಾದವ್ ಮಾಜಿ ಗ್ರಾ.ಪ.ಉಪಾಧ್ಯಕ್ಷರಾದ ಬಿ ಡಿ ಕೃಷ್ಣಮೂರ್ತಿ, ಜಯಪ್ರಕಾಶ್ ಊರಿನ ಯಜಮಾನರಾದ ನಾಗಜ್ಜ, ಮುತ್ತಪ್ಪರ ಕೆಂಚಪ್ಪ , ಮಾಜಿ ಗ್ರಾಮ ಪ. ಸದಸ್ಯರಾದ ದಾಸಪ್ಪ, ಶಿಕ್ಷಕರಾದ ಎಂ. ಪರಶುರಾಮ್, ಗ್ರಾ. ಪ ಸದಸ್ಯರಾದ ಸುಮಲತಾ ಕೆಂಚಪ್ಪ,ನಾಗರಾಜ್, ಹಾಗೂ ಯುವಕ ಸಂಘದ ಎಲ್ಲಾ ಯುವಕರು ಹಟ್ಟಿ ಯಜಮಾನರು ಉಪಸ್ಥಿತರಿದ್ದರು.    ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯರಿಗೆ ಹೂ ಮಾಲೆ ಶಾಲು ಹಾಕಿ ಗೌರವ ಸಲ್ಲಿಸಲಾಯಿತು.ಶಾಂತಿ ಸುವ್ಯವಸ್ಥೆ ಯೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಿದ ಎಲ್ಲಾ ವ್ಯವಸ್ಥಾಪಕ ಯುವಕರಿಗೆ ಹಟ್ಟಿಯ ಗ್ರಾಮಸ್ಥರಿಂದ ಪ್ರಶಂಸೆ ಸಲ್ಲಿಸಿದರು, ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು..

Recent Articles

spot_img

Related Stories

Share via
Copy link