ಪ್ರಧಾನಿ ವಿರುದ್ದ ಟೀಕೆ : ಸೊರೊಸ್‌ ಗೆ ಜಯಶಂಕರ್‌ ತಿರುಗೇಟು

ನವದೆಹಲಿ:

    ಪ್ರಧಾನಮಂತ್ರಿ  ಅವರನ್ನು ಟೀಕಿಸಿದ್ದ ಅಮೆರಿಕಾದ ಕೋಟ್ಯಾಧಿಪತಿ ಜಾರ್ಜ್ ಸೊರೊಸ್ ವಿರುದ್ಧ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮೂರು ಪದಗಳಲ್ಲಿ ತಿರುಗೇಟು ನೀಡಿದ್ದಾರೆ.

    ಆಸ್ಟ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವಿದೇಶಾಂಗ ಸಚಿವ ಜೈಶಂಕರ್‌ ಅವರು, ಜಾರ್ಜ್ ಸೊರೊಸ್ ವಿರುದ್ಧ ಕಿಡಿಕಾರಿದರು.

    ವಯಸ್ಸಾದ, ಶ್ರೀಮಂತ, ಅಪಾಯಕಾರಿ ವ್ಯಕ್ತಿಯೆಂದು ಜಾರ್ಜ್ ಸೊರೊಸ್ ವಿರುದ್ಧ ಜೈಶಂಕರ್ ಅವರು ಕಿಡಿಕಾರಿದ್ದು, ಚುನಾವಣೆ ಫಲಿತಾಂಶಗಳು ತಮ್ಮ ಇಚ್ಛೆಯಂತೆ ಇಲ್ಲದೆ ಇರುವಂತಹ ಸಂದರ್ಭದಲ್ಲಿ ಸೊರೊಸ್‌ನಂತವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಶ್ನಿಸಲು ಆರಂಭಿಸುತ್ತಾರೆಂದು ಹೇಳಿದ್ದಾರೆ.

   “ಕೆಲವು ವರ್ಷಗಳ ಹಿಂದೆ ಭಾರತದ ಲಕ್ಷಾಂತರ ಮುಸ್ಲಿಮರ ಪೌರತ್ವವನ್ನು ನಾವು ಕಸಿದುಕೊಳ್ಳಲು ಯೋಜಿಸಿದ್ದೇವೆ ಎಂದು ಅವರು ಆರೋಪಿಸಿದ್ದರು. ಆದರೆ, ಅದಾಗಲಿಲ್ಲ. ಅದೊಂದು ಹಾಸ್ಪಾಸ್ಪದ ಹೇಳಿಕೆಯಾಗಿತ್ತು. ಇದರ ಅರ್ಥ ಏನೆಂದು ನೀವೇ ಅರ್ಥ ಮಾಡಿಕೊಳ್ಳಬೇಕು. ಸೊರೊಸ್‌ ಅವರು ನ್ಯೂಯಾರ್ಕ್‌ನಲ್ಲಿ ಕುಳಿತಿರುವ ವಯಸ್ಸಾದ, ಶ್ರೀಮಂತ, ಅಪಾಯಕಾರಿ ವ್ಯಕ್ತಿಯಾಗಿ ನನಗೆ ಕಾಣಿಸುತ್ತಾರೆ. ಅವರು ತಮ್ಮ ದೃಷ್ಟಿಕೋನಗಳ ರೀತಿಯೇ ಜಗತ್ತು ನಡೆಯಬೇಕು ಎಂದು ಈಗಲೂ ಬಯಸುತ್ತಿದ್ದಾರೆ” ಎಂದು ಹೇಳಿದರು.

    “ವಯಸ್ಸಾದ, ಶ್ರೀಮಂತ ಮತ್ತು ಅಭಿಪ್ರಾಯ ಮಾತ್ರ ಆಗಿದ್ದರೆ ನಾನು ಅವರ ಮಾತನ್ನು ಕಡೆಗಣಿಸ ಬಹುದಿತ್ತು. ಆದರೆ, ಆತ ವಯಸ್ಸಾದ, ಶ್ರೀಮಂತ, ಅಭಿಪ್ರಾಯ ಮತ್ತು ಅಪಾಯಕಾರಿ ವ್ಯಕ್ತಿಯಾಗಿ ದ್ದಾರೆ. ಇಂತಹ ಜನರು ಜನಾಭಿಪ್ರಾಯ ಮೂಡಿಸಲು ಹೂಡಿಕೆ ಮಾಡಿದಾಗ ಏನಾಗುತ್ತದೆ?ʼ ಎಂದು ಅವರು ಪ್ರಶ್ನಿಸಿದ್ದಾರೆ.

   92 ವರ್ಷದ ಜಾರ್ಜ್ ಸೊರೊಸ್ ಅವರು ಗುರುವಾರ 2023ರ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಷಣ ಮಾಡುವಾಗ, ಗೌತಮ್ ಅದಾನಿ ಅವರ ವ್ಯವಹಾರದ ತೊಂದರೆಗಳಿಂದ ಪ್ರಧಾನಿ ಮೋದಿ ದುರ್ಬಲರಾಗುತ್ತಾರೆ ಎಂದು ಹೇಳಿದ್ದರು.

   ‘ಅದಾನಿ ಹಗರಣವು ಭಾರತದ ಒಕ್ಕೂಟ ಸರ್ಕಾರದಲ್ಲಿ ಮೋದಿ ಹಿಡಿತವನ್ನು ದುರ್ಬಲ ಗೊಳಿಸಲಿದೆ ಮತ್ತು ಬಹು ಅಪೇಕ್ಷಿತ ಸಾಂಸ್ಥಿಕ ಸುಧಾರಣೆಗೆ ಕಾರಣವಾಗಲಿದೆ. ಈ ವಿಷಯದಲ್ಲಿ ನಾನು ನಿಷ್ಕಪಟಿ ಇರಬಹುದು. ಆದರೆ ಭಾರತದಲ್ಲಿ ಪ್ರಜಾಪ್ರಭುತ್ವ ಪುನರುಜ್ಜೀವನ ಆಗಬೇಕು ಎಂದು ಬಯಸುತ್ತೇನೆ’ ಎಂದು ತಿಳಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap