ಜೆಡಿಎಸ್ ಪಕ್ಷ ಸಾಮಾಜಿಕ ನ್ಯಾಯದ ಪರ :ಗೋವಿಂದರಾಜು

ತುಮಕೂರು

     ಜೆಡಿಎಸ್ ಪಕ್ಷ ಸಾಮಾಜಿಕ ನ್ಯಾಯದ ಪರವಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಹಿಂದುಳಿದವರು, ದಲಿತರು, ಸಾಮಾನ್ಯ ಸಮುದಾಯಗಳಿಗೆ ಟಿಕೆಟ್‌ನೀಡಿ ಅವಕಾಶ ಕಲ್ಪಿಸಿರುವುದೇ ನಿದರ್ಶನ ಎಂದು ಜೆಡಿಎಸ್ ನಗರ ಅಭ್ಯರ್ಥಿ ಗೋವಿಂದರಾಜು ತಿಳಿಸಿದರು.

      ನಗರದಲ್ಲಿ ಜೆಡಿಎಸ್ ಪ್ರಚಾರದ ವೇಳೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ಬಂಡಾಯ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್‌ನಲ್ಲಿ ಎರಡನೇ ಪಟ್ಟಿ ಬಿಡುಗಡೆಯಾದ ಬಳಿಕ ಅಸಮಾಧಾನ ಸ್ಫೋಟಗೊಂಡಿದ್ದು, ಯಾವುದೇ ಪಕ್ಷದಲ್ಲಿ ಟಿಕೆಟ್ ಘೋಷಣೆಯಾದ ಬಳಿಕ ಇತರೆ ಆಕಾಂಕ್ಷಿಗಳು ಅಸಮಧಾನಗೊಳ್ಳುವುದು ಸಹಜ.

     ಆದರೆ ಕಾಂಗ್ರೆಸ್‌ನಲ್ಲಿ ಈ ಅಸಮಾಧಾನ ತೀವ್ರಗೊಂಡಿದ್ದು, ಅಸಮಾಧಾನಿತರು ಜೆಡಿಎಸ್ ಪಕ್ಷ ಜಾತ್ಯಾತೀತ, ಸಾಮಾಜಿಕ ನ್ಯಾಯದ ಪರವಿದೆಯೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ನಾಯಕತ್ವ ಮೆಚ್ಚಿ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ. ಇದರಿಂದ ಮುಂಬರುವ ಚುನಾವಣೆಯಲ್ಲಿ ಪಕ್ಷ ಅತ್ಯಧಿಕ ಸ್ಥಾನ ಗೆಲ್ಲುವ ದಿಕ್ಸೂಚಿಯೆನಿಸಿದೆ ಎಂದರು.

     ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು, ಲಿಂಗಾಯಿತ, ಒಕ್ಕಲಿಗ, ಬ್ರಾಹ್ಮಣರು ಸೇರಿ ಎಲ್ಲಾ ವರ್ಗದವರಿಗೂ ಜೆಡಿಎಸ್ ಪಕ್ಷ ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಪ್ರಾತಿನಿಧ್ಯ ಕಲ್ಪಿಸಿದ್ದು, ತುಮಕೂರು ಜಿಲ್ಲೆಯಲ್ಲಿ ಇಬ್ಬರು ಹಿಂದುಳಿದವರು,ಎರಡು ಕಡೆ ದಲಿತರು, ಉಳಿದ 7ಕಡೆ ಸಾಮಾನ್ಯರಿಗೆ ಸ್ಪರ್ಧಿಸಲು ಅವಕಾಶ ಕೊಟ್ಟಿದೆ. ಇದನ್ನು ಎಲ್ಲಾಸಮುದಾಯಗಳು ಅರ್ಥ ಮಾಡಿಕೊಂಡು ಈ ಬಾರಿ ಜೆಡಿಎಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

     ತುಮಕೂರು ನಗರದಲ್ಲಿ ಶೀಘ್ರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಶೀಘ್ರ ಪ್ರಚಾರ ಸಮಾವೇಶವನ್ನು ನಡೆಸಲಿದ್ದು, ನಗರದಲ್ಲಿ ಸ್ವಜನ ಪಕ್ಷಪಾತ ರಹಿತ ಸಮಗ್ರ ಅಭಿವೃದ್ಧಿಗೆ ಈ ಬಾರಿ ಪ್ರಜ್ಞಾವಂತ ನಾಗರಿಕರು ಜೆಡಿಎಸ್ ಬೆಂಬಲಿಸುವ ವಿಶ್ವಾಸವಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap