ಮಾ.26ಕ್ಕೆ ಚಾಮುಂಡಿ ತಪ್ಪಲಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ

ಬೆಂಗಳೂರು :

     ಜಾತ್ಯತೀತ ಜನತಾದಳದ ಪ್ರಚಂಡ ಶಕ್ತಿ ಪ್ರದರ್ಶನ ಮಾರ್ಚ್ 26 ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆಯಲಿದೆ. ಅಂದು ನಡೆಯುವ ಸಮಾವೇಶದಲ್ಲಿ ಹತ್ತು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದ್ದು, ಇದಕ್ಕೆ ಸಂಬAಧಿಸಿದಂತೆ ಪಕ್ಷದ ಶಾಸಕರು ಮತ್ತು ಪ್ರಮುಖ ನಾಯಕರ ಸಭೆ ಶನಿವಾರ ನಡೆಯಿತು.

     ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ನೇತೃತದಲ್ಲಿ ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಶನಿವಾರ ಸಭೆ ನಡೆದಿದ್ದು, ಮಾರ್ಚ್ ಇಪ್ಪತ್ತಾರರ ಸಮಾವೇಶದಲ್ಲಿ ಜೆಡಿಎಸ್ ಹಲವು ಘೋಷಣೆಗಳನ್ನು ಮಾಡಲಿದೆ.

    ರಾಜ್ಯದ ಇತಿಹಾಸದಲ್ಲಿ ಹಿಂದೆAದೂ ನಡೆಯದಂತಹ ಐತಿಹಾಸಿಕ ಸಮಾವೇಶವನ್ನು ನಡೆಸಲು ಜೆಡಿಎಸ್ ನಾಯಕರು ತೀರ್ಮಾನಿಸಿದ್ದಾರೆ. ಇಂದಿನ ಸಭೆಯಲ್ಲಿ ಸಮಾವೇಶದ ಪೂರ್ವಭಾವಿ ಸಿದ್ಧತೆಯನ್ನು ಪರಿಶೀಲಿಸಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗಣನೀಯ ಸಂಖ್ಯೆಯ ಸ್ಥಾನಗಳನ್ನು ಗೆದ್ದು ಅಧಿಕಾರ ಸೂತ್ರ ಹಿಡಿಯುವ ಕನಸು ಕಾಣುತ್ತಿರುವ ಜೆಡಿಎಸ್ ಮೈಸೂರು ಸಮಾವೇಶದ ಮೂಲಕ ತನ್ನ ಶಕ್ತಿ ಪ್ರದರ್ಶಿಸಲು ತೀರ್ಮಾನ ಮಾಡಿದೆ.

    ಈ ಮಧ್ಯೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಎಂಭತ್ತರ ಗಡಿ ದಾಟುವುದು ಕಷ್ಟ ಎಂಬ ಲೆಕ್ಕಾಚಾರದಲ್ಲಿರುವ ಜೆಡಿಎಸ್, ರಾಜ್ಯದ ಯಾವ ಕ್ಷೇತ್ರಗಳಳ್ಲಿ ಕಾಂಗ್ರೆಸ್ ಪ್ರಥಮ ಮತ್ತು ಜೆಡಿಎಸ್ ದ್ವಿತೀಯ ಸ್ಥಾನದಲ್ಲಿದೆಯೋ ಅಲ್ಲಿ ಅನಿರೀಕ್ಷಿತ ನೆರವಿನ ಹಸ್ತ ತನ್ನ ನೆರವಿಗೆ ಬರಲಿದೆ ಎಂಬುದು ಜೆಡಿಎಸ್ ನಾಯಕರ ವಿಶ್ವಾಸ. ಇದೇ ರೀತಿ ಟಿಕೆಟ್ ಹಂಚಿಕೆಯ ಗೊಂದಲ ಕಾಂಗ್ರೆಸ್ ಮತ್ತು ಬಿಜೆಪಿ ಪಾಳೆಯವನ್ನು ಕಂಗೆಡಿಸಲಿದ್ದು, ಆ ಪಕ್ಷಗಳಿಂದ ಗಣನೀಯ ಸಂಖ್ಯೆಯ ನಾಯಕರು ಜೆಡಿಎಸ್‌ಗೆ ವಲಸೆ ಬರಲಿದ್ದಾರೆ ಎಂದು ಅದು ನಂಬಿದೆ.

ರೋಡ್ ಷೋ ಇಲ್ಲ :

      ಮೈಸೂರು ಸಮಾವೇಶಕ್ಕೂ ಮುನ್ನ ಬೆಂಗಳೂರಿನಿAದ ರೋಡ್ ಷೋ ನಡೆಸುವ ಉದ್ದೇಶವನ್ನು ಜೆಡಿಎಸ್ ಬಹುತೇಕ ಕೈ ಬಿಟ್ಟಿದೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರನ್ನು ತೆರೆದ ವಾಹನದಲ್ಲಿ ಬೆಂಗಳೂರಿನ ಕುಂಬಳಗೋಡಿನಿAದ ಮೈಸೂರಿನ ಸಮಾವೇಶದ ಜಾಗಕ್ಕೆ ಕರೆದೊಯ್ಯುವುದು ಜೆಡಿಎಸ್ ಯೋಚನೆಯಾಗಿತ್ತು. ಆದರೆ ದೈಹಿಕ ಅನಾರೋಗ್ಯದಿಂದ ಬಳಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ತೆರೆದ ವಾಹನದಲ್ಲಿ ರೋಡ್ ಷೋ ಮೂಲಕ ಕರೆದೊಯ್ಯಲು ವೈದ್ಯರು ಒಪ್ಪಿಗೆ ನೀಡಿಲ್ಲ.

     ಈ ವಯಸ್ಸಿನಲ್ಲಿ ದೇವೇಗೌಡರು ಮೈಸೂರಿನ ತನಕ ರೋಡ್ ಷೋ ಮೂಲಕ ಪ್ರಯಾಣಿಸುವುದು ಅಪಾಯ. ಹೀಗಾಗಿ ದೇವೇಗೌಡರನ್ನು ನೇರವಾಗಿ ಸಮಾವೇಶಕ್ಕೆ ಕರೆದೊಯ್ಯಬೇಕು ಎಂದು ಹಲ ನಾಯಕರು ಸಭೆಯಲ್ಲಿ ಪ್ರಸ್ತಾಪ ಮಾಡಿದರು.

ಕೆಸಿಆರ್‌ಗೆ ಬುಲಾವ್ ಇಲ್ಲ :

    ಅದೇ ರೀತಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿರುವ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರನ್ನು ಸಮಾವೇಶಕ್ಕೆ ಕರೆಸುವ ಯೋಚನೆ ಮಾಡಲಾಗಿತ್ತಾದರೂ ಇದೀಗ ಅದನ್ನು ಕೈ ಬಿಡಲಾಗಿದೆ. ಉನ್ನತ ಮೂಲಗಳ ಪ್ರಕಾರ, ಕೆ.ಸಿ.ಚಂದ್ರಶೇಖರರಾವ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಮೈಸೂರಿನ ಸಮಾವೇಶದಲ್ಲಿ ಭಾಗವಹಿಸುವುದು ಅವರಿಗೆ ಕಷ್ಟವಾಗಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap