ಸಂಸದನ ಹೆಸರು ಬರೆದಿಟ್ಟು ಪಂಚಾಯತ್ ಸಿಇಒ ಜೀಪ್ ಚಾಲಕ ನೇಣಿಗೆ ಶರಣು…..!

ಚಿಕ್ಕಬಳ್ಳಾಪುರ :

    ಚಿಕ್ಕಬಳ್ಳಾಪುರ  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೀಪ್ ಚಾಲಕ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತ ಭವನದಲ್ಲಿ ನಡೆದಿದೆ. ನಗರದ ಬಾಪೂಜಿನಗರ ನಿವಾಸಿ 33 ವರ್ಷದ ಬಾಬು ಆತ್ಮಹತ್ಯೆಗೆ ಶರಣಾಗಿರುವ ಯುವಕ. ಇವರು ಡೆತ್‌ನೋಟ್‌ ಬರೆದಿಟ್ಟಿದ್ದು, ಅದರಲ್ಲಿ ನನ್ನ ಸಾವಿಗೆ ಸಂಸದ ಡಾ ಕೆ. ಸುಧಾಕರ್  ಹಾಗೂ ಇನ್ನೂ ಹಲವರು ಕಾರಣ ಎಂದು ದೂರಿದ್ದಾರೆ. ಕೆಲಸ ಕಾಯಂ ಮಾಡಲು ಲಂಚ ಪಡದು ಮೋಸ ಮಾಡಿದ್ದಾಗಿ ಆರೋಪಿಸಿದ್ದಾರೆ.

   ಸಂಸದ ಕೆ. ಸುಧಾಕರ್‌ ಆಪ್ತ, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ ಅವರ ಅಳಿಯ ನಾಗೇಶ್ ಎನ್ ಚಿಕ್ಕ ಕಾಡಿಗೇನಹಳ್ಳಿ ಹಾಗು ಮಂಜುನಾಥ್ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 25 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಬರೆದಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲಾ ಪಂಚಾಯತಿ ಲೆಕ್ಕ ಸಹಾಯಕರ ವಿರುದ್ಧವೂ ಡೆತ್‌ ನೋಟ್‌ನಲ್ಲಿ ಬಾಬು ಹಲವು ಆರೋಪ ಮಾಡಿದ್ದಾರೆ.

    ಇವರು ಪರಿಶಿಷ್ಟ ಜನಾಂಗಕ್ಕೆ ಸೇರಿದವರಾಗಿದ್ದು, ಕಳೆದ 8 ವರ್ಷಗಳಿಂದ ಅಧಿಕಾರಿಗಳಿಗೆ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಾಪೂಜಿ ನಗರದಲ್ಲಿ ವಾಸವಾಗಿದ್ದ ಬಾಬು ಅವರಿಗೆ ಪತ್ನಿ ಇದ್ದಾರೆ. ಗುರುವಾರ ಮುಂಜಾನೆ 6 ಗಂಟೆಯ ಸಮಯದಲ್ಲಿ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ ಕಚೇರಿ ಬಳಿ ಚಾಲಕರು ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿದ್ದ ಹೊಂಗೆ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಎಂದಿನಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಕೆಲಸಕ್ಕೆ ಬಂದ ನೌಕರರು ಹಾಗು ಕಾಂಪೌಡ್ ಹೊರಗಡೆ ಹೂತೋಟದಲ್ಲಿ ಹೂಕೀಳುತ್ತಿದ್ದ ರೈತರು ಇದನ್ನು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲಿಸ್ ಠಾಣೆಯ ಅಧಿಕಾರಿಗಳು ತೆರಳಿ ಪರಿಶೀಲಿಸಿದ್ದಾರೆ.

   ಕಳೆದ 8 ವರ್ಷಗಳಿಂದ ಚಾಲಕನಾಗಿ 15 ಸಾವಿರ ವೇತನಕ್ಕೆ ಕೆಲಸ ಮಾಡುತ್ತಿದ್ದು, ಚಾಲಕ ವೃತ್ತಿಯನ್ನು ಕಾಯಂ ಮಾಡಲು ಕೆಲವರು ಹಣ ಪಡೆದಿದ್ದು ಕೆಲಸ ಕೊಡಿಸಿಲ್ಲ. ಇದರಿಂದ ಮನನೊಂದು ತನಗೆ ಮೋಸ ಮಾಡಿದ 3 ವ್ಯಕ್ತಿಗಳ ಹೆಸರನ್ನು ಡೆತ್ ನೋಟ್‌ನಲ್ಲಿ ಬರೆದು ನೇಣಿಗೆ ಶರಣಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link