ಬೆಂಗಳೂರು : ಜೀವ ತೆಗೆದ ಪಟಾಕಿ : 6 ಜನರ ವಿರುದ್ದ ಪ್ರಕರಣ ದಾಖಲು

ಬೆಂಗಳೂರು

   ಪಟಾಕಿ ಜೊತೆ ಹುಡುಗಾಟವಾಡಲು ಹೋಗಿ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ಕೋಣನಕುಂಟೆ ವ್ಯಾಪ್ತಿಯ ವಿವರ್ಸ್ ಕಾಲೋನಿಯಲ್ಲಿ ನಡೆದಿದೆ. ಶಬರೀಶ್​ (32) ಮೃತ ಯುವಕ. ಯುವಕರ ಹುಚ್ಚಾಟದ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  ವಿಡಿಯೋದಲ್ಲಿನ ಐದಾರು ಮಂದಿ ಯುವಕರು ಶಬರೀಶ್​ಗೆ ಸವಾಲು ಹಾಕುತ್ತಾರೆ. ಪಟಾಕಿ ಅಂಟಿಸಿ, ಡಬ್ಬದಿಂದ ಮುಚ್ಚಿ, ಅದರ ಮೇಲೆ ಕೂರುತ್ತೀಯಾ ಅಂತ ಸವಾಲು ಹಾಕಿದ್ದಾರೆ. ಅದರಂತೆ ಡಬ್ಬದೊಳಗೆ ಪಟಾಕಿ ಇರಿಸಿ ಅದರ ಮೇಲೆ ಶಬರೀಶ್​ನನ್ನು ಕೂರಿಸಿದ್ದಾರೆ.‌ ನಂತರ ಪಟಾಕಿ ಹೊತ್ತಿಕೊಳ್ಳುತ್ತಿದ್ದಂತೆ ಯುವಕರೆಲ್ಲ ಓಡಿ ಹೋಗಿದ್ದಾರೆ. ಬಳಿಕ, ಪಟಾಕಿ ಸ್ಪೋಟಗೊಂಡು ಶಬರೀಶ್​ನ ಹಿಂಬದಿ ಮತ್ತು ಗುಪ್ತಾಂಗಗಳಿಗೆ ತೀವ್ರ ಗಾಯವಾಗಿದೆ. ಅಕ್ಟೋಬರ್ 31ರ ರಾತ್ರಿ ಘಟನೆ ನಡೆದಿದೆ.

   ಕೂಡಲೆ ಶಬರೀಶ್​ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ, ಚಿಕಿತ್ಸೆ ಫಲಿಸದೆ ಎರಡು ದಿನಗಳ ಬಳಿಕ ಶಬರೀಶ್​ ಸುಟ್ಟಗಾಯಗಳ ವಿಭಾಗದಲ್ಲಿ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಟಾಕಿ ಹಚ್ಚಿದ ಡಬ್ಬ ಮೇಲೆ ಕುಳಿತರೆ ಆಟೋ ಕೊಡಿಸುತ್ತೇವೆ ಅಂತ ಯುವಕರು ಚಾಲೆಂಜ್ ಹಾಕಿದ್ದರು. ಆಟೋ ಆಸೆಗಾಗಿ ಶಬರೀಶ್​ ಪಟಾಕಿ ಡಬ್ಬ ಮೇಲೆ ಕುಳಿತಿದ್ದನು ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.

   ಸದ್ಯ ಆರು ಜನರ ವಿರುದ್ದ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹುಡುಗಾಟಕ್ಕೆ ಜೀವ ತೆಗೆದ ಆರೋಪಿಗಳಾದ ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್​ನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

Recent Articles

spot_img

Related Stories

Share via
Copy link