100 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ : 9 ಮಂದಿ ಸಾವು!!

ಅಲ್ಮಾಟಿ :

      ಸುಮಾರು 95 ಪ್ರಯಾಣಿಕರು ಹಾಗೂ ಐವರು ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡ ಪರಿಣಾಮ ಕನಿಷ್ಠ 9 ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

       ಕಝಖ್ ಸ್ತಾನದ ಅತ್ಯಂತ ದೊಡ್ಡ ನಗರ ಅಲ್ಮಾಟಿಯ ಏರ್‌ಪೋರ್ಟ್ ಬಳಿ ಈ ಘಟನೆ ನಡೆದಿದೆ. ಸದ್ಯ ಸ್ಥಳದಲ್ಲಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ.

     ವಿಮಾನವು ಟೇ-ಆಫ್ ವೇಳೆ ನಿಯಂತ್ರಣ ಕಳೆದುಕೊಂಡು ಕಾಂಕ್ರೀಟ್ ಬೇಲಿಯನ್ನು ತುಂಡರಿಸಿ ಸಣ್ಣ ಕಟ್ಟಡವೊಂದಕ್ಕೆ ಢಿಕ್ಕಿ ಹೊಡೆದಿದೆ ಎಂದು ಕಝಖ್‌ಸ್ತಾನದ ನಾಗರಿಕ ವಿಮಾನಯಾನ ಸಮಿತಿಯು ತಿಳಿಸಿದೆ.

 

      ಪತನವಾಗಿರುವ ವಿಮಾನ ಕಜಕ್ ಕ್ಯಾರಿಯರ್ ಬೆಕ್ ಏರ್ ನಿರ್ವಹಿಸುವ ಫ್ಲೀಟ್ ಫೋಕರ್ 100 ಸರಣಿಗೆ ಸೇರಿದ್ದಾಗಿದೆ. ಈ ಮಾದರಿಯ ಎಲ್ಲಾ ವಿಮಾನಗಳ ಹಾರಾಟವನ್ನು ತಕ್ಷಣ ನಿಲ್ಲಿಸುವಂತೆ ವಿಮಾನಯಾನ ಸಂಸ್ಥೆ ಆದೇಶಿಸಿದೆ.

      ವಿಮಾನದ ಅವಶೇಷಗಳ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತುರ್ತು ಪರಿಸ್ಥಿತಿ ತಂಡ ಘಟನಾ ಸ್ಥಳದಲ್ಲಿದೆ ಎಂದು ಸಮಿತಿ ತಿಳಿಸಿದೆ.

 

Recent Articles

spot_img

Related Stories

Share via
Copy link
Powered by Social Snap