ಜಿಯೋ ಸಿನಿಮಾ ಜತೆ ಹಾಟ್‌ಸ್ಟಾರ್‌ ವಿಲೀನ….!

ನವದೆಹಲಿ:

    ವಯಾಕಾಂ18 ಮತ್ತು ಸ್ಟಾರ್ ಇಂಡಿಯಾ ವಿಲೀನದ ಜಂಟಿ ಸಹಯೋಗದಿಂದ ರೂಪುಗೊಂಡ ಜಿಯೊ ಸಿನಿಮಾ ಹಾಗೂ ಹಾಟ್‌ ಸ್ಟಾರ್‌ ಇನ್ನು ಮುಂದೆ ಜಿಯೊ ಹಾಟ್‌ಸ್ಟಾರ್‌ ಆಗಿ ಅಧಿಕೃತವಾಗಿ ಅನಾವರಣಗೊಳ್ಳಲಿದೆ. ಮನರಂಜನೆ ಹಾಗೂ ಕ್ರೀಡೆಯ ಮುಖ್ಯ ಫ್ಲಾಟ್‌ಫಾರ್ಮ್‌ ಆಗಿದ್ದ ಜಿಯೋ ಸಿನಿಮಾ ಮತ್ತು ಡಿಸ್ನೀ+ಹಾಟ್ ಸ್ಟಾರ್ ಇನ್ನು ಮುಂದೆ ವಿಲೀನವಾಗಲಿದೆ. ಈಗಾಗಲೇ ಜಿಯೊ ಹಾಟ್‌ಸ್ಟಾರ್‌ ಲೋಗೋ ಕೂಡ ಬಿಡುಗಡೆಯಾಗಿದೆ. ಈ ಬ್ರಾಂಡ್‌ಗಳ ಒಗ್ಗೂಡುವಿಕೆ ಮೂಲಕ ಸ್ಟ್ರೀಮಿಂಗ್‌ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ. 3 ಲಕ್ಷ ಗಂಟೆಗಳ ಮನರಂಜನೆ ಮತ್ತು 50 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಜಿಯೊಹಾಟ್ ಸ್ಟಾರ್ ಮನರಂಜನೆಯನ್ನು ಮರು ವ್ಯಾಖ್ಯಾನಿಸಲಿದೆ.

     ಫೆ. 14 ರಿಂದ ಜಿಯೊಹಾಟ್ ಸ್ಟಾರ್ ಸೇವೆ ಪ್ರಾರಂಭವಾಗಲಿದೆ. ಬಳಕೆದಾರ ತನ್ನ ಅನುಕೂಲತೆಗೆ ತಕ್ಕಂತೆ ರಿಚಾರ್ಜ್‌ ಮಾಡಿಸಿಕೊಳ್ಳಬಹುದು. ಈ ಯೋಜನೆಗೆ 149 ರೂಪಾಯಿ ಅಥವಾ ವಾರ್ಷಿಕವಾಗಿ ₹499 ಪಾವತಿಸಬಹುದು. . ಸೂಪರ್ ಪ್ಲಾನ್ ಮೊಬೈಲ್, ವೆಬ್‌ಗಳಲ್ಲಿ ಎರಡು ಪ್ಲಾನ್‌ ಒದಗಿಸಲಾಗುತ್ತದೆ. ಇದರ ಬೆಲೆ ಮೂರು ತಿಂಗಳಿಗೆ 299 ರೂ. ಮತ್ತು ವಾರ್ಷಿಕವಾಗಿ 899 ರೂ ಆಗಿದೆ. ಜಾಹೀರಾತು-ಮುಕ್ತ ವೀಕ್ಷಣೆಗಾಗಿ ವಿಶೇಷ ಪ್ಲಾನ್‌ಗಳಿದ್ದು, ಇದರ ಬೆಲೆ ಮೂರು ತಿಂಗಳಿಗೆ 499 ರೂ. ಅಥವಾ ವಾರ್ಷಿಕವಾಗಿ 1,499 ರೂ ಆಗಿದೆ. 

    ಇಂದಿನಿಂದ ಮಹಿಳೆಯ ಪ್ರೀಮಿಯರ್‌ ಲೀಗ್‌ ಪ್ರಾರಂಭವಾಗಿದೆ. ಇಷ್ಟು ದಿನ ಉಚಿತವಾಗಿ ಕ್ರಿಕೆಟ್‌ ನೋಡುತ್ತಿದ್ದ ಅಭಿಮಾನಿಗಳಿಗೆ ಬಿಗ್‌ ಶಾಕ್‌ ಎದುರಾಗಿದೆ. ಐಪಿಎಲ್‌ ಅಭಿಮಾನಿಗಳ ಈ ಬಾರಿ ಅಭಿಮಾನಿಗಳ ಜೇಬಿಗೆ ಕತ್ತರಿ ಬೀಳಲಿದೆ. 2023ರಿಂದ ಐದು ವರ್ಷಗಳ ಕಾಲ ಜಿಯೋ ಐಪಿಎಲ್‌ ಡಿಜಿಟಲ್ ಫ್ಲಾಟ್‌ ಫಾರ್ಮ್‌ ಹಕ್ಕನ್ನು ಪಡೆದಿತ್ತು. ಈ ವರ್ಷದಿಂದ ಐಪಿಎಲ್‌ ನೋಡಬೇಕಾದರೆ ಹಣ ಪಾವತಿಸಬೇಕು. ಈ ಫ್ಲಾಟ್‌ ಫಾರ್ಮ್‌ ಮೂಲಕ ಚಂದಾದಾರರು ಐಸಿಸಿ ಈವೆಂಟ್‌ ಹಾಗೂ ಹಲವು ಕ್ರೀಡೆಗಳ ನೇರ ಪ್ರಸಾರವನ್ನು ವೀಕ್ಷಿಸಬಹುದು.ವಿಲೀನದ ಬಗ್ಗೆ ಮಾತನಾಡಿದ ಜಿಯೊ ಸ್ಟಾರ್‌ ಸಿಇಒ ಕಿರಣ್‌ ನಾವು ಭಾರತೀಯರಿಗೆ ಪ್ರೀಮಿಯಂ ಮನರಂಜನೆಯನ್ನು ಕೊಡುವ ಉದ್ದೇಶವನ್ನು ಹೊಂದಿದ್ದೇವೆ. ನಾವು ಕಂಟೆಂಟ್‌ಗಳನ್ನು 19 ಭಾಷೆಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆ ಒದಗಿಸುತ್ತೇವೆ ಎಂದು ಅವರು ಹೇಳಿದ್ದಾರೆ.

Recent Articles

spot_img

Related Stories

Share via
Copy link