ಮಧುಗಿರಿ : ಕೂಲಿ ಕಾರ್ಮಿಕರಿಂದ ಲಂಚಕ್ಕೆ ಬೇಡಿಕೆ ಇಟ್ಟ ಜೆಜೆಎಂ ಇಂಜಿನಿಯರ್‌……!

ಮಧುಗಿರಿ :

    ಜೆ ಜೆ ಎಂ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುವ ಹೊರ ಗುತ್ತಿಗೆಯ ಎಂಜಿನಿಯರ್ ಒಬ್ಬ ಕೂಲಿ ಕಾರ್ಮಿಕರನ್ನು ಅವಾಚ್ಯ ಪದಗಳಿಂದ ನಿಂದಿಸಿ ಲಂಚದ ಹಣಕ್ಕೆ ಬೇಡಿಕೆ ಇಡುತ್ತಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

    ತಾಲೂಕಿನಲ್ಲಿ ಜಲ ಜೀವನ್ ಯೋಜನೆಯಡಿಯಲ್ಲಿ ಮನೆ ಮನೆಗೂ ಗಂಗೆ ಎಂಬ ಹೆಸರಿನಲ್ಲಿ ಕಳೆದ ಮೂರು ವರ್ಷಗಳಿಂದ ಕಾಮಗಾರಿ ಯು ನಡೆಯುತ್ತಿದ್ಧು ಈ ಹಿಂದಿನ ಜಿಲ್ಲಾಧಿಕಾರಿಗಳು ಜೆಜೆಎಂ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು ಯೋಜನೆಯು ಪ್ರಗತಿ ಸಾಧಿಸುವಲ್ಲಿ ವಿಫಲವಾಗಿದ್ದು ಗುಣಮಟ್ಟದ ಕಾಮಗಾರಿ ಯನ್ನು ನಿರ್ವಹಣೆ ಮಾಡುವಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಕೀತು ಮಾಡಿದ್ದರು.

    ಜೆ ಜೆ ಎಂ ಕಾಮಗಾರಿಗಳಲ್ಲಿ ಟ್ರಂಚ್ ನಿರ್ಮಾಣಕ್ಕೆ 20ಸಾವಿರ , ಕಾಂಕ್ರೀಟ್ ಹಾಕಲು 15ಸಾವಿರ , ಸ್ಟ್ಯಾಂಡ್ ಪೋಸ್ಟ್ ಗೆ 10ಸಾವಿರ ಹಾಗೂ ಟ್ಯಾಂಕ್ ನಿರ್ಮಾಣಕ್ಕೆ 30 ಸಾವಿರ ರೂಗಳಂತೆ ಹಣವನ್ನು ನೀಡಬೇಕೆಂದು ಹೊರಗುತ್ತಿಗೆ ನೌಕರ ಎಂಜಿನಿಯರ್ ಹರ್ಷ ಎಂಬುವವರು ಲಂಚದ ಹಣವನ್ನು ನಿಗಧಿ ಮಾಡಿದ್ದು ಹಣ ಕೊಟ್ಟರೆ ಮಾತ್ರ ಓಕೆ ಎನ್ನುವುದು , ಹಣ ಕೊಡದೆ ಹೋದರೆ ವಿನಾ ಕಾರಣ ಖ್ಯಾತೆ ತೆಗೆಯುವುದನ್ನು ಮಾಡುತ್ತಾ ಕಾಮಗಾರಿಗಳನ್ನು ನಿರ್ವಹಣೆ ಮಾಡಲು ಬಿಡದೆ ತೊಂದರೆ ನೀಡುತ್ತಿದ್ದಾರೆಂದು ಮಾಯಗೊಂಡನಹಳ್ಳಿಯ ಕೂಲಿ ಕಾರ್ಮಿಕರಾದ ಶ್ರೀನಿವಾಸ , ಪಾವಗಡ ತಾಲೂಕಿನ ರಾಮಮೂರ್ತಿ , ಪುಲಮಾಚಿಯ ಮಂಜುನಾಥ , ರೊಳ್ಳ ಗ್ರಾಮದ ತಿಮ್ಮಪ್ಪ , ದೊಕ್ಕಲಪಲ್ಲಿಯ ಮಂಜುನಾಥ್ ಹಾಗೂ ಮತ್ತಿತರರು ಆರೋಪಿಸಿ ದ್ದು ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳು ನ್ಯಾಯ ಒದಗಿಸಿಕೊಡುವಂತೆ ಮನವಿ ಪತ್ರದಲ್ಲಿ ಕೋರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap