ಪ್ರಹ್ಲಾದ್‌ ಜೋಶಿ ಅಥವಾ ಬಿಎಲ್‌ ಸಂತೋಷ್‌ ಆಗಲಿ ಸಿಎಂ ಆಗಲು ಸಾಧ್ಯವಿಲ್ಲ : ಯತ್ನಾಳ್

ವಿಜಯಪುರ

   ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆಗಲಿ, ಇಲ್ಲ ಬಿಎಲ್‌ ಸಂತೋಷ್‌ ಆಗಲಿ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದು ವಿಜಯಪುರ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್‌ ಹೇಳಿದ್ದಾರೆ.

    ಬಿಜೆಪಿಯಿಂದ ಮುಂದಿನ ಮುಖ್ಯಮಂತ್ರಿ ಯಾರು ಆಗಬೇಕು ಎಂಬ ಚರ್ಚೆ ಬೆನ್ನಲ್ಲೇ ಬಸನಗೌಡ ಪಾಟೀಲ್‌ ಯತ್ನಾಳ ಅವರು ಈ ಮೇಲಿನಂತೆ ಹೇಳಿದ್ದಾರೆ. ಪ್ರಹ್ಲಾದ್‌ ಜೋಶಿ ಅವರು ಕೇಂದ್ರ ರಾಜಕೀಯದಲ್ಲಿ ಇರುತ್ತಾರೆ. ಅವರು ಇಲ್ಲಿಗೆ ಬರುವ ಪ್ರಮೇಯ ಇಲ್ಲ. ಬಿಎಲ್‌ ಸಂತೋಷ್‌ ಕೂಡ ಇಲ್ಲಿಗೆ ಬರುವ ಮಾತಿಲ್ಲ. ಹೀಗಾಗಿ ಮುಂದೆ ಯಾವತ್ತಿದ್ದರೂ ಲಿಂಗಾಯತ ನಾಯಕರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದರು.
     ನಾನು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಇಲ್ಲ. ಲಿಂಗಾಯತರು ಯಾರದರೂ ಬರಬಹುದು. ಅರವಿಂದ ಬೆಲ್ಲದ್‌ ಬಗ್ಗೆ ನನಗೆ ಗೊತ್ತಿಲ್ಲ. ಕರ್ನಾಟಕದಲ್ಲಿ ಬಿಜೆಪಿಯೊಳಗೆ ಲಿಂಗಾಯತರು ಮಾತ್ರವೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದರು.

      ಜಗದೀಶ್ ಶೆಟ್ಟರ್ ಬಗ್ಗೆ ವಾಗ್ದಾಳಿ ನಡೆಸಿದ ಬಸನಗೌಡ ಯತ್ನಾಳ್‌ ಅವರು, ಕೆಲವೊಂದು ಮಂದಿ ಭಾರತೀಯ ಜನತಾ ಪಾರ್ಟಿಯನ್ನು ಬಿಟ್ಟು ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್‌ ಸೇರಿಕೊಂಡಿದ್ದಾರೆ. ಯಾವುದು ದೇಶ ವಿರೋಧಿ 2047ರಲ್ಲಿ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಉದ್ದೇಶವಿರುವ ಎಸ್‌ಡಿಪಿಐ ಹಾಗೂ ಪಿಎಫ್‌ಐ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್‌ ಜೊತೆ ಹೋಗಿರುವವರು ಬಿಜೆಪಿಯಲ್ಲಿ ಎಲ್ಲ ಅಧಿಕಾರವನ್ನು ಅನುಭವಿಸಿದ್ದಾರೆ.

     ಶಾಸಕ, ಸಚಿವ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಹಾಗೂ ಸ್ಪೀಕರ್‌ ಹೀಗೆ ಎಲ್ಲ ಸ್ಥಾನಮಾನಗಳನ್ನು ಅನುಭವಿಸಿ ಹೋಗಿದ್ದಾರೆ. ದುಡಿಯದೇ ದುಃಖಪಡದೆ ಉಂಡಿದ್ದಾರೆ. ಇಲ್ಲಿ ದುಡಿದವರೇ ಬೇರೆ. ಈ ದೇಶಕ್ಕೆ ನರೇಂದ್ರ ಮೋದಿ ಬೇಕಾಗಿದ್ದಾರೆ. ಕರ್ನಾಟಕಕ್ಕೆ ಹೊಸ ನಾಯಕತ್ವ ಬರಲಿದೆ. ಹೊಸ ಎರಡನೇ ಸಾಲಿನ ನಾಯಕರು ಇಲ್ಲಿ ಮುಂದೆ ಬರಲಿದ್ದಾರೆ, ನಮ್ಮಲ್ಲೂ ಯುವ ನಾಯಕರು ಇದ್ದಾರೆ ಎಂದರು.

    ಇಲ್ಲಿ ಜೋಶಿ ಹಾಗೂ ಸಂತೋಷ್‌ ಪಾತ್ರ ಏನು ಇಲ್ಲ. ನಾನು ರೇಸ್‌ನಲ್ಲಿ ಇದ್ದೇನೆ ಎನ್ನಲಾಗುವುದಿಲ್ಲ. ಈಗ ಶಾಮನೂರು ಶಿವಶಂಕರಪ್ಪ, ಜಗದೀಶ್‌ ಶೆಟ್ಟರ್‌ ಬೀಗರು ಈಗ ಒಂದಾಗಿದ್ದಾರೆ. ಮೊದಲು ಶಾಮನೂರು ಶಿವಶಂಕರಪ್ಪ, ಜಗದೀಶ್‌ ಶೆಟ್ಟರ್‌, ಎಂಬಿ ಪಾಟೀಲ್‌ ಎಲ್ಲ ಬೀಗರು ಮೊದಲು ಹೊಂದಾಣಿಕೆ ರಾಜಕಾರಣ ಇತ್ತು. ಆದರೆ ಈಗ ಎಲ್ಲ ಬೀಗರು ಬಿಜ್ಜರು ಹೊಂದಾಗಿದ್ದಾರೆ. ಇನ್ನು ಅವರದ್ದೇ ಬೇರೆ ಇದೆ. ಹೀಗಾಗಿ ಸಂತೋಷವಾಗಿದೆ ಎಂದು ಹೇಳಿದರು.

 
     ಕರ್ನಾಟಕದಲ್ಲಿ ಬಿಜೆಪಿಯಿಂದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಆರಂಭವಾಗಿತ್ತು. ಕರ್ನಾಟಕದಲ್ಲಿ ಮುಂದೆ ಪ್ರಹ್ಲಾದ್‌ ಜೋಶಿ ಇಲ್ಲವೇ ಬಿಎಲ್‌ ಸಂತೋಷ್‌ ಅವರನ್ನು ಮುಖ್ಯಮಂತ್ರಿ ಮಾಡಲು ಎಲ್ಲ ಹಿರಿಯ ಬಿಜೆಪಿ ನಾಯಕರಿಗೆ ಟಿಕೆಟ್‌ ನೀಡದೆ ಕೆಲವರಿಗೆ ಬಲವಂತವಾಗಿ ನಿವೃತ್ತಿ ಪಡೆಯುವಂತೆ ಹೇಳಿ ಜೋಶಿ ಹಾಗೂ ಸಂತೋಷ್‌ ಅವರನ್ನು ಮುನ್ನೆಲೆಗೆ ತರುವ ಪ್ರಯತ್ನವಾಗುತ್ತಿದೆ ಎಂದು ಆರೋಪಗಳು ಕೇಳಿ ಬಂದಿದ್ದವು.
 
      ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಕೂಡ ತಮಗೆ ಬಿಜೆಪಿಯಿಂದ ಟಿಕೆಟ್‌ ಕೈತಪ್ಪಿದ್ದಕ್ಕೆ ಕಾಂಗ್ರೆಸ್‌ ಸೇರ್ಪಡೆಯಾಗಿ ಲಿಂಗಾಯತರನ್ನು ಬಿಜೆಪಿಯಲ್ಲಿ ತುಳಿಯುವ ಪ್ರಯತ್ನವಾಗುತ್ತಿದೆ ಎಂದು ಹೇಳಿದ್ದರು, ಮುಂದುವರಿದು ಮಂಗಳವಾರ ಸುದ್ದಿಗೋಷ್ಟಿ ನಡೆಸಿದ್ದ ಅವರು ನನಗೆ ಬಿಜೆಪಿ ಟಿಕೆಟ್‌ ಕೈತಪ್ಪಲು ಬಿಎಲ್‌ ಸಂತೋಷ್‌ ಕಾರಣ ಎಂದೂ ಹೇಳಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap