ನವದೆಹಲಿ:
ಅದಾನಿ ಸಮೂಹದ ಕಂಪನಿಗಳ ಭ್ರಷ್ಟಾಚಾರ ಮತ್ತು ಆರ್ಥಿಕ ದುರುಪಯೋಗದ ಆರೋಪಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವಂತ ಒತ್ತಾಯಿಸಿ ಪ್ರತಿಪಕ್ಷಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಪ್ರತ್ಯೇಕವಾಗಿ ಪ್ರತಿಭಟನೆಗಳನ್ನು ನಡೆಸಿದ್ದು, ಈ ಪ್ರತಿಭಟನೆಗಳು ವಿರೋಧಪಕ್ಷಗಳಲ್ಲಿ ಮೂಡಿರುವ ಬಿರುಕನ್ನು ಬಹಿರಂಗಪಡಿಸಿದೆ.
ಲಂಡನ್ ನಲ್ಲಿ ಕಾಂಗ್ರೆಸ್ ನಾಯಕ ನೀಡಿದ್ದ ರಾಹುಲ್ ಗಾಂಧಿ ಹೇಳಿಕೆ ಲೋಕಸಭೆಯಲ್ಲಿ ಮಂಗಳವಾರ ಕೋಲಾಹಲ ಎಬ್ಬಿಸಿತ್ತು. ತೀವ್ರ ಗದ್ದಲ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲಾಗಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಡಿಎಂಕೆ, ಸಿಪಿಎಂ, ಜೆಡಿಯು, ಆರ್‌ಜೆಡಿ, ಎನ್‌ಸಿಪಿ, ಎಸ್‌ಪಿ ಸೇರಿದಂತೆ ಹಲವು ಪಕ್ಷಗಳು ಜೆಪಿಸಿ ತನಿಖೆಗೆ ಒತ್ತಾಯಿಸಿ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದವು.
ಬಿಆರ್‌ಎಸ್ ಮತ್ತು ಎಎಪಿ ಇತರ ಪಕ್ಷಗಳಿಂದ ಸ್ವಲ್ಪ ದೂರ ನಿಂತು ನಿರ್ಧರಿಸಿ, ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿತು. ಈ ಬೆಳವಣಿಗೆ ವಿಪಕ್ಷಗಳ ನಡುವೆ ಒಡಕು ಮೂಡಿರುವುದನ್ನು ಸ್ಪಷ್ಟಪಡಿಸಿತು.