ಬೆಂಗಳೂರು:
ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಜೂನ್ ತಿಂಗಳ ಹಣ ಬಿಡುಗಡೆ ಪ್ರಕ್ರಿಯೆ ಸೋಮವಾರ ಆರಂಭವಾಗಿದೆ.ಇನ್ನು ಎರಡು ಮೂರು ದಿನದಲ್ಲಿ ಮೊದಲ ಹಂತದಲ್ಲಿ 26.65 ಲಕ್ಷ ಫಲಾನುಭವಿಗಳಿಗೆ ತಲಾ ಎರಡು ಸಾವಿರ ರೂಪಾಯಿ ಪಾವತಿಸಲಾಗುವುದು. ಮೊದಲ ಹಂತದಲ್ಲಿ 533 ಕೋಟಿ ರೂಪಾಯಿ ಪಾವತಿಗೆ ಸೋಮವಾರದಿಂದ ಪ್ರಕ್ರಿಯೆ ಶುರುವಾಗಿದ್ದು, ಬುಧವಾರದೊಳಗೆ 26.65 ಲಕ್ಷ ಅರ್ಹ ಫಲಾನುಭವಿಗಳಿಗೆ ಜೂನ್ ತಿಂಗಳ ಹಣ ಖಾತೆಗೆ ಜಮಾ ಆಗಲಿದೆ.
ಇನ್ನುಳಿದ ಫಲಾನುಭವಿಗಳಿಗೆ ಆಗಸ್ಟ್ 10ರೊಳಗೆ ಜೂನ್ ತಿಂಗಳ ಹಣ ಖಾತೆಗೆ ನೇರವಾಗಿ ಪಾವತಿಸಲಾಗುವುದು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಹಣವನ್ನು ಒಟ್ಟಿಗೆ ಪಾವತಿಸಲಾಗಿತ್ತು. ಇದೀಗ ಜೂನ್ ಮತ್ತು ಜುಲೈ ತಿಂಗಳ ಹಣ ಪಾವತಿಗೆ ಬಾಕಿಯಿದ್ದು, ವಾರಾಂತ್ಯದೊಳಗೆ ಜೂನ್ ತಿಂಗಳ ಹಣ ಖಾತೆಗೆ ಜಮೆ ಮಾಡಲಾಗುವುದು ಎಂದು ಹೇಳಲಾಗಿದೆ.