ಜಸ್ಟಿಸ್ ವಿ. ಗೋಪಾಲಗೌಡರ ಅಭಿನಂದನಾ ಗ್ರಂಥ ಕ್ಕೆ ಸೂಕ್ತ ಹೆಸರು ಸೂಚಿಸಿ

 ಬೆಂಗಳೂರು,

     ; ರಾಜ್ಯದ ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬದಲ್ಲಿ ಹುಟ್ಟಿಬೆಳೆದು ನ್ಯಾಯಾಂಗ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಜಸ್ಟಿಸ್ ವಿ. ಗೋಪಾಲಗೌಡರ ಅಭಿನಂದನಾ ಗ್ರಂಥ ಕ್ಕೆ ಸೂಕ್ತ ಹೆಸರು ಸೂಚಿಸುವಂತೆ ಅಭಿನಂದನಾ ಸಮಿತಿಯ ಸಂಚಾಲಕ ಎಂ.ಎನ್. ಪಿಳ್ಳಪ್ಪ ಮನವಿ ಮಾಡಿದ್ದಾರೆ. 

     ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ಜಸ್ಟೀಸ್ ವಿ. ಗೋಪಾಲಗೌಡರು 73 ವರ್ಷಗಳ ತುಂಬು ಜೀವನ ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ 45 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ಣಗೊಳಿಸಿದ್ದಾರೆ. ಅವರ ಅಭಿಮಾನಿಗಳು, ಹಿರಿಯ ನ್ಯಾಯವಾದಿಗಳು, ಸಮಾಜದ ಮುಖಂಡರು ಅಭಿನಂದನಾ ಸಮಿತಿ ರಚಿಸಿದ್ದು, ಗ್ರಂಥ ರಚನೆ ಈಗಾಗಲೇ ಪ್ರಾರಂಭವಾಗಿದೆ. ವಿಶಿಷ್ಟವಾದ ಅಭಿನಂದನಾ ಗ್ರಂಥಕ್ಕೆ ಸೂಕ್ತ ಹೆಸರು ಸೂಚಿಸುವಂತೆ, ಹಿರಿಯರು, ಸಾಹಿತ್ಯಾಸಾಕ್ತರಲ್ಲಿ ಮನವಿ ಮಾಡಿದ್ದಾರೆ. 

    ಜಸ್ಟಿಸ್ ವಿ. ಗೋಪಾಲಗೌಡರ ಅಭಿನಂದನಾ ಗ್ರಂಥವನ್ನು ಬರಹಗಾರ ಡಾ. ನಂಜುಂಡಸ್ವಾಮಿ ಅವರ ಸಂಪಾದಕದಲ್ಲಿ ಬರಲಿದೆ. ಗ್ರಂಥ ಕನ್ನಡ, ಇಗ್ಲೀಷ್, ಹಿಂದಿ ಮೂರು ಭಾಷೆಗಳಲ್ಲಿ ಬರಲಿದೆ. ಕನ್ನಡ ಭಾಷೆಯಲ್ಲಿ ಬರೆದಿರುವ ಗ್ರಂಥ ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ.

    ಹಿಂದಿ ಭಾಷೆಯಲ್ಲಿ ಒರಿಸ್ಸಾ ರಾಜ್ಯ, ಇಂಗ್ಲೀಷ್ ಭಾಷೆಯಲ್ಲಿ ದೆಹಲಿಯಲ್ಲಿ ಬಿಡುಗಡೆಯಾಗಲಿದೆ. ಅಭಿನಂದನಾ ಗ್ರಂಥದ ಹೆಸರನ್ನು ಈ ಮೊಬೈಲ್ ವಾಟ್ಸ್ಆಪ್ ನಂಬರ್‌ಗೆ 9945431926 ಅಥವಾ ಪತ್ರದ ಮೂಲಕ ಈ ವಿಳಾಸಕ್ಕೆ ಈ ತಿಂಗಳ 30ರ ಒಳಗಾಗಿ ಬರೆದು ತಿಳಿಸಬೇಕು. #520, 8ನೇ ಮುಖ್ಯ ರಸ್ತೆ, ಪೋಸ್ಟ್ ಆಫೀಸ್ ರಸ್ತೆ, ಸದಾಶಿವನಗರ, ಬೆಂಗಳೂರು 560080 ಗ್ರಂಥದ ಹೆಸರನ್ನು ಆಯ್ಕೆ ಮಾಡಿದವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದರು. ವೀರಶೈವ ಸಂಘದ ಸದಸ್ಯರಾದ ಮೃತ್ಯುಂಜಯಸ್ವಾಮಿ, ವಕೀಲರಾದ ಶಿವಶಂಕರಪ್ಪ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು

Recent Articles

spot_img

Related Stories

Share via
Copy link
Powered by Social Snap