ಬೆಂಗಳೂರು
ಕಿತ್ತೂರು ಉತ್ಸವದ ಜ್ಯೋತಿ ಬೆಳಗುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಟ್ಟೆಗೆ ಬೆಂಕಿ ತಾಗಿದೆ. ಇದನ್ನು ಕಂಡ ಗನ್ ಮ್ಯಾನ್ ಕೂಡಲೆ ಬೆಂಕಿ ನಂದಿಸಿದ್ದಾರೆ. ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ. ವಿಧಾನಸೌಧದ ಮುಂಭಾಗ ನಡೆದ ಕಿತ್ತೂರು ಉತ್ಸವ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ.
ಸಿಎಂ ಸಿದ್ದರಾಮಯ್ಯ ಅವರು ಕಿತ್ತೂರು ಉತ್ಸವಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ, ಕಿತ್ತೂರು ಉತ್ಸವದ ಠಥಕ್ಕೆ ಹಸಿರು ನಿಶಾನೆ ತೋರಿಸಿವ ವೇಳೆ ಪಕ್ಕದಲ್ಲೇ ಇದ್ದ ದೀಪದ ಬೆಂಕಿ ಸಿದ್ದರಾಮಯ್ಯ ಅವರ ಶಲ್ಯಕ್ಕೆ ತಾಗಿದೆ. ಕೂಡಲೆ ಗನ್ ಮ್ಯಾನ್ ಬೆಂಕಿ ನಂದಿಸಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿದೆ.
ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬೆರಳಿಗೆ ಗಾಯವಾಗಿತ್ತು. ಕಾವೇರಿ ನಿವಾಸದಲ್ಲಿ ಜನರ ಸಮಸ್ಯೆ ಆಲಿಸಿ ಅರ್ಜಿ ಸ್ವೀಕರಿಸುವ ವೇಳೆ ಸಿಎಂ ಸಿದ್ದರಾಮಯ್ಯ ಕೈಗೆ ಗುಂಡು ಪಿನ್ ಚುಚ್ಚಿ ಗಾಯವಾಗಿತ್ತು. ಗಾಯವಾಗಿದ್ದ ಬೆರಳಿಗೆ ಕರ್ಚಿಫ್ ಸುತ್ತಿಕೊಂಡು ವಿಧಾನಸೌಧಕ್ಕೆ ತೆರಳಿದ್ದರು. ಆದರೆ, ರಕ್ತ ಮಾತ್ರ ನಿಂತಿರಲಿಲ್ಲ. ಕೂಡಲೆ ವಿಧಾನಸೌಧಕ್ಕೆ ಆಗಮಿಸಿದ ವೈದ್ಯರು, ಸಮಿತಿ ಕೊಠಡಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಬೆರಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು.