ಬೆಂಗಳೂರು
ಕನ್ನಡ ಮತ್ತು ತೆಲುಗು ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ಜನಪ್ರಿಯ ನಟಿ ಜ್ಯೋತಿ ರೈ ಅವರು ಈಗ ಬೇಡದ ವಿಷಯಕ್ಕೆ ಸುದ್ದಿಯಾಗಿದ್ದಾರೆ. ನಟಿಯ ಖಾಸಗಿ ವೀಡಿಯೊಗಳು ಎಂದು ಒಟ್ಟು ಮೂರು ಅಶ್ಲೀಲ ವಿಡಿಯೋಗಳು ಹಾಗೂ ಒಂದಷ್ಟು ಅಶ್ಲೀಲ ಫೋಟೋಗಳನ್ನು ಇನ್‌ಟರ್‌ನೆಟ್‌ನಲ್ಲಿ ಸೋರಿಕೆ ಮಾಡಲಾಗಿದೆ.
ದೇಶದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳು ಸದ್ದು ಮಾಡುತ್ತಿರುವ ವೇಳೆ ನಟಿಯ ವಿಡಿಯೋಗಳು ಎಂದು ಹಲವನ್ನು ವೈರಲ್ ಮಾಡಲಾಗಿದೆ. ಎಡಿಟ್ ಬೈ ಅಭಿ ಎನ್ನುವ ಟ್ವಿಟರ್ ಖಾತೆಯಲ್ಲಿ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತೇನೆ ಎಂದು ಬಹಿರಂಗವಾಗಿಯೇ ಬರೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಟಿ ಜ್ಯೋತಿ ರೈ ಪ್ರತಿಕ್ರಿಯೆ ನೀಡಿದ್ದಾರೆ.
ವೈರಲ್ ವಿಡಿಯೋ, ಫೋಟೋಗಳಿಗೆ ನಟಿ ಹೇಳಿದ್ದೇನು?
ನಟಿ ಜ್ಯೋತಿ ರೈ ಇತ್ತೀಚೆಗೆ ನಿರ್ದೇಶಕ ಸುಕುಮಾರ್ ಜೊತೆಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಅಲ್ಲದೇ ಸಾಮಾಜಿಕ ಮಾಧ್ಯಮಗಳಲ್ಲಿ ಹಾಟ್, ರೋಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದರ ಬೆನ್ನಲ್ಲೇ ಅವರ ವಿಡಿಯೋಗಳು ಎಂದು ಹೇಳಿ ಫೋಟೋಗಳು, ಸ್ಕ್ರೀನ್ ಶಾಟ್‌ಗಳನ್ನು ಶೇರ್ ಮಾಡಲಾಗುತ್ತಿದೆ.
ಈ ಕುರಿತಂತೆ ಜ್ಯೋತಿ ರೈ ಕೆಲವು ವ್ಯಕ್ತಿಗಳು ತಮ್ಮ ನಕಲಿ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಘಟನೆ ಬಗ್ಗೆ ಈಗಾಗಲೇ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಹರಿದಾಡುತ್ತಿರುವ ಫೋಟೋ ಮತ್ತು ವಿಡಿಯೋಗಳು ನಕಲಿ ಎಂದು ಸ್ಪಷ್ಟ ಪಡಿಸಿದ್ದಾರೆ.
” ನಾನು ಅಪರಿಚಿತ ವ್ಯಕ್ತಿಗಳಿಂದ ಈ ಸಂದೇಶಗಳನ್ನು ಸ್ವೀಕರಿಸಿ ನಾನು ಆಘಾತಕ್ಕೊಳಗಾಗಿದ್ದೇನೆ. ನನ್ನ ಖ್ಯಾತಿ ಮತ್ತು ನನ್ನ ಕುಟುಂಬದ ಪ್ರತಿಷ್ಠೆಗೆ ಅಪಾಯದಲ್ಲಿರುವುದರಿಂದ ಈ ಬಳಕೆದಾರರು/ವ್ಯಕ್ತಿಗಳ ವಿರುದ್ಧ ಸರಿಯಾದ ಮತ್ತು ತ್ವರಿತ ಕ್ರಮವನ್ನು ತೆಗೆದುಕೊಳ್ಳುವಂತೆ ವಿನಂತಿಸುತ್ತೇನೆ. ಅಲ್ಲದೆ, ಈ ಬಳಕೆದಾರರು/ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಸರಿಪಡಿಸಲಾಗದ ಹಾನಿ ಉಂಟಾಗುತ್ತದೆ. ನಿಮ್ಮ ಪರಿಶೀಲನೆ ಮತ್ತು ತನಿಖೆಗಾಗಿ ನಾನು ಎಲ್ಲಾ ಬಳಕೆದಾರರ ಯೂಸರ್ ಐಡಿಗಳನ್ನು ಲಗತ್ತಿಸಿದ್ದೇನೆ.
ಈ ‘ಅಜ್ಞಾತ ಬಳಕೆದಾರರ’ ವಿರುದ್ಧ ಈ ಕೆಳಗಿನ ಅಪರಾಧಗಳನ್ನು ಮಾಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 66 (ಇ) ಅಡಿಯಲ್ಲಿ ಖಾಸಗಿತನದ ಉಲ್ಲಂಘನೆಗಾಗಿ ಶಿಕ್ಷೆ. ಮಾಹಿತಿ ತಂತ್ರಜ್ಞಾನ ಕಾಯಿದೆ, 2000, 2000 ರ ಸೆಕ್ಷನ್ 67 ರ ಅಡಿಯಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಸ್ತುಗಳನ್ನು ಪ್ರಕಟಿಸಲು ಅಥವಾ ರವಾನಿಸಿದ ಕಾರಣ ಶಿಕ್ಷೆ, ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 67 (ಎ) ಅಡಿಯಲ್ಲಿ ಲೈಂಗಿಕ ಕ್ರಿಯೆಯನ್ನು ಒಳಗೊಂಡಿರುವ ವಸ್ತುಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಕಟಿಸಿದ ಕಾರಣ ಶಿಕ್ಷೆ ಮತ್ತು ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 509 ರ ಅಡಿಯಲ್ಲಿ ಮಹಿಳೆಯ ಘನತೆಯನ್ನು ಅವಮಾನಿಸುವ ಉದ್ದೇಶದಿಂದ ಪದಗಳು ಅಥವಾ ಕೆಲಸ ಮಾಡಿರುವ ಕಾರಣ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಜ್ಯೋತಿ ರೈ ಕನ್ನಡ ಮತ್ತು ತೆಲುಗು ಟಿವಿ ಧಾರಾವಾಹಿ ನಟಿ. ಕನ್ನಡದಲ್ಲಿ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಇವರು ಸದ್ಯ ಸ್ಟಾರ್ ಮಾದಲ್ಲಿ ಪ್ರಸಾರವಾಗುತ್ತಿರುವ, ಗುಪ್ಪೆದಂತ ಮನಸು ಧಾರಾವಾಹಿಯಿಂದ ತೆಲುಗು ಪ್ರೇಕ್ಷಕರಿಗೆ ತುಂಬ ಆಪ್ತರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತನ್ನ ಮನಮೋಹಕ ಚಿತ್ರಗಳ ಮೂಲಕ ಅಭಿಮಾನಿಗಳನ್ನು ಆಶ್ಚರ್ಯಕ್ಕೆ ನೂಕುತ್ತಾರೆ.
ಜೊತೆಗೆ, ಅವರು ತೆಲುಗು ನಿರ್ದೇಶಕ ಸುಕುಮಾರ್ ಪೂರ್ವಜ್ ಅವರೊಂದಿಗೆ ವಿವಾಹವಾಗಿರುವ ಬಗ್ಗೆ ತಿಳಿಸಿ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ನಟಿ ಜ್ಯೋತಿ ರೈ ತನ್ನ 20 ನೇ ವಯಸ್ಸಿನಲ್ಲಿ ಮೊದಲ ಮದುವೆಯಾಗಿದ್ದರು. ನಂತರ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಆಕೆಗೆ 11 ವರ್ಷದ ಮಗನಿದ್ದಾನೆ.