ಚಿಕ್ಕಮಗಳೂರು:
ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್ ಕಚೇರಿಯಲ್ಲಿ ಕಳ್ಳತನವಾಗಿದೆ. ಕೆ.ಜೆ.ಜಾರ್ಜ್ ಆಪ್ತ ಸಹಾಯಕ ಮೋಗಣ್ಣ ಅವರ ಬ್ಯಾಗ್ ಕಳ್ಳತನವಾಗಿದೆ. ನಗರದ ಪ್ರವಾಸಿ ಮಂದಿರದಲ್ಲಿರುವ ಇಂಧನ ಇಲಾಖೆ ಕಚೇರಿಯಲ್ಲಿ ಮೋಗಣ್ಣ ಅವರು ಬ್ಯಾಗ್ ಇಟ್ಟು ತೆರಳಿದ್ದಾಗ ಕಳ್ಳರು ಕೈಚಳಕ ತೋರಿಸಿದ್ದಾರೆ. ಬ್ಯಾಗ್ನಲ್ಲಿ ಇಂಧನ ಇಲಾಖೆಯ ಪ್ರಮುಖ ಫೈಲ್, 15 ಸಾವಿರ ಹಣವಿತ್ತು ಎಂದು ತಿಳಿದುಬಂದಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ