ಸಿದ್ದರಾಮಯ್ಯ ನವರು ಮಖ್ಯಮಂತ್ರಿಯಾಗಿರುವವರೆವಿಗೂ ನನ್ನ ರಾಜಕೀಯ ಭವಿಷ್ಯಕ್ಕೆ ತೊಂದರೆ ಇಲ್ಲಾ : ಕೆ ಎನ್‌ ರಾಜಣ್ಣ

ಮಧುಗಿರಿ:

    ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಖ್ಯಮಂತ್ರಿಯಾಗಿರುವವರೆವಿಗೂ ನನ್ನ ರಾಜಕೀಯ ಭವಿಷ್ಯಕ್ಕೆ ತೊಂದರೆ ಇಲ್ಲಾ ಎಂದು ಮಾಜಿ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಸ್ಪಷ್ಟಪಡಿಸಿದರು.

    ಅವರು ಕೊಡಿಗೇನ ಹೋಬಳಿಯ ಜನ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ,ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ , ಕಾಂಗ್ರೆಸ್ ಪಕ್ಷ ನನಗೆಲ್ಲಾವನ್ನೂ ಕೊಟ್ಟಿದೆ. ನಾನು ಪಕ್ಷದಲ್ಲಿಯೇ ಇರುತ್ತೇನೆ.

   ಇನ್ನೂ ದೆಹಲಿಗೆ ನಿಯೋಗ ತೆರಳುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಸಚಿವರು ನನಗೆ ಸಿದ್ದರಾಮಯ್ಯ ನವರು ಇರುವವರೆವಿಗೂ ನನಗೆ ಯಾವುದೇ ರಾಜಕೀಯ ಭವಿಷ್ಯಕ್ಕೆ ತೊಂದರೆಯಿಲ್ಲ ಆದ್ದರಿಂದ ದೆಹಲಿಗೆ ಯಾವ ನಿಯೋಗವು ಹೋಗುವುದು ಬೇಡವಾಗಿದ್ದು ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ.ನನಗೆ ಜಿಲ್ಲೆಯಲ್ಲಿ ಅತ್ಯಧಿಕ ಮತಗಳ ಲೀಡ್ ನೀಡಿದ್ದೀರಾ ನನಗೆ ರಾಜಕೀಯದಲ್ಲಿ ಬೆನ್ನು ತೋರಿಸಿ ಓಡಿ ಹೋಗುವಂತಹ ವ್ಯಕ್ತಿಯಲ್ಲಾ ಎಲ್ಲಾವನ್ನೂ ಎದುರಿಸುವ ಶಕ್ತಿಯನ್ನು ನೀವು ನೀಡಿದ್ದೀರಾ ಎಂದರು.

Recent Articles

spot_img

Related Stories

Share via
Copy link