ಬೆಂಗಳೂರು:
ಇತ್ತೀಚಿಗಷ್ಟೇ ಕಲರ್ ಯುಕ್ತ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯನ್ನು ಬ್ಯಾಂಕ್ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಕಬಾಬ್ ಗೂ ಅದೇ ನಿಯಮ ಅಳವಡಿಸಿದೆ. ಹೌದು, ಚಿಕನ್, ಫಿಶ್ ಸೇರಿ ಯಾವುದೇ ರೀತಿಯ ಕಬಾಬ್‌ಗೆ ಇನ್ಮುಂದೆ ಕಲರ್ ಬಳಕೆ ಮಾಡುವಂತಿಲ್ಲ. ಕಬಾಬ್ ಗಳಿಗೆ ಕಲರ್ ಬಳಕೆಯನ್ನು ಬ್ಯಾನ್ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಸದ್ಯ ರಾಜ್ಯಾದ್ಯಂತ ಮಾರಾಟವಾಗುತ್ತಿರುವ ಕಬಾಬ್‍ನ ಗುಣಮಟ್ಟ ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಕಳಪೆಯಿಂದ ಕೂಡಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಅತಿಯಾದ ದುಷ್ಪರಿಣಾಮ ಬೀರುತ್ತಿದೆ.. ಈ ಹಿನ್ನಲೆಯಲ್ಲಿ ರಾಜ್ಯದ ವಿವಿಧ 36 ಕಡೆಗಳಲ್ಲಿ ಕಬಾಬ್ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ನೀಡಲಾಗಿತ್ತು.. ವಿಶ್ಲೇಷಣೆಗೊಳಗಾದ ಬಹುತೇಕ ಸ್ಯಾಂಪಲ್ ಗಳಲ್ಲಿ ಯೆಲ್ಲೋ ಮತ್ತು ಕಾರ್ಮೋಸಿನ್ ಕೃತಕ ಬಣ್ಣಗಳ ಮಾದರಿ ಕಂಡು ಬಂದಿದೆ. ಇದು The Food Safety and Standards Act, 2006 ರ ನಿಯಮ 3(1) (viii)ರನ್ವಯ ಅಸುರಕ್ಷಿತವಾಗಿರುತ್ತವೆ. ಹಾಗಾಗಿ ಸರ್ಕಾರ ಕಬಾಬ್ ಗೆ ಕೃತಕ ಕಲರ್ ಬಳಕೆ ಮಾಡುವುದನ್ನು ನಿಷೇಧಿಸಿದೆ.
ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದೇ ಆದಲ್ಲಿ ಕಲರ್ ಕಬಾಬ್ ತಯಾರಿಸುವವರ ಮೇಲೆ ನಿಯಮದ ಅನ್ವಯ 7 ವರ್ಷದಿಂದ ಜೀವಾವಧಿ ಶಿಕ್ಷೆವರೆಗೆ ಹಾಗೂ 10 ಲಕ್ಷ ದಂಡವನ್ನ ವಿಧಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.