ಮೈಸೂರು:
ನೆರೆಯ ಕೇರಳದ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇದರ ಪರಿಣಾಮ ಕಬಿನಿ ಜಲಾಶಯದ ನೀರಿನ ಮಟ್ಟ ಹೆಚ್ಚಾಗಿದೆ. ಇದೀಗ ಜಲಾಶಯ ಸಂಪೂರ್ಣ ಭರ್ತಿಯಾಗಲು 5 ಅಡಿಗಳಷ್ಟು ನೀರು ಮಾತ್ರ ಬಾಕಿಯಿದೆ. ಜಲಾಶಯ ಭರ್ತಿಯಾಗುತ್ತಿರುವ ರೈತರಲ್ಲಿ ಸಂತಸ ತಂದಿದೆ. ಬುಧವಾರ ಜಲಾಶಯದ ನೀರಿನ ಮಟ್ಟ 2,279.54 ಅಡಿಗಳಷ್ಟಿತ್ತು, ಪೂರ್ಣ ಜಲಾಶಯದ ಮಟ್ಟ 2,284 ಅಡಿಗಳಷ್ಟಿದೆ. ಕಬಿನಿ ಜಲಾಶಯವು ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ತಾಲ್ಲೂಕಿನಲ್ಲಿದ್ದು, ಮುಂದಿನ ವಾರ ಜಲಾಶಯ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆಗಳಿವೆ ಎಂದು ಮೂಲಗಳು ತಿಳಿಸಿವೆ.
ಕೇರಳ ಮತ್ತು ಕರ್ನಾಟಕದ ಗಡಿ ಭಾಗಗಳಲ್ಲಿ ಮುಂಗಾರು ಸಕ್ರಿಯವಾಗಿದ್ದು, ಇದರ ಪರಿಣಾಮ ಕಬಿನಿ ಜಲಾಶಯದ ನೀರಿನ ಮಟ್ಟ ನಿರಂತರ ಹೆಚ್ಚಳವಾಗುತ್ತಿದೆ. ಕಬಿನಿ ರೈತರ ಜೀವನಾಡಿಯಾಗಿದ್ದು. ಜಲಾಶಯ ಭರ್ತಿಯಾಗುತ್ತಿರುವುದು ರೈತರಲ್ಲಿ ಹರ್ಷ ತಂದಿದೆ.
ಕಬಿನಿ ಜಲಾಶಯವು ಈ ಪ್ರದೇಶದಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆಯ ಪ್ರಸ್ತುತ ನೀರಿನ ಮಟ್ಟದಲ್ಲಿನ ಹೆಚ್ಚಳವು ಒಟ್ಟಾರೆ ನೀರಿನ ನಿರ್ವಹಣೆಗೆ ಧನಾತ್ಮಕ ಸೂಚಕವಾಗಿದೆ.
ಜಲಾಶಯವು ಪೂರ್ಣ ಸಾಮರ್ಥ್ಯದ ಸಮೀಪದಲ್ಲಿದ್ದು, ಇದೀಗ ಅಧಿಕಾರಿಗಳು ನೀರಿನ ಒಳಹರಿವು ಮತ್ತು ಹೊರಹರಿವನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಬುಧವಾರದ ವೇಳೆಗೆ ಅಣೆಕಟ್ಟಿನ ಒಳಹರಿವು 9,807 ಕ್ಯೂಸೆಕ್‌ನಷ್ಟಿದ್ದರೆ, ಹೊರಹರಿವು 2,917 ಕ್ಯೂಸೆಕ್ ಇತ್ತು.