ಬೆಂಗಳೂರು:
ಕನ್ನಡ ಸಿನಿಮಾದ ಬುದ್ಧಿವಂತ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ದೇಶಕ ಆರ್ ಚಂದ್ರು ಕಾಂಬಿನೇಷನ್ ನ ಮೂರನೇ ಸಿನಿಮಾ ಬಹುನರೀಕ್ಷಿತ ಕಬ್ಜ ಚಿತ್ರ ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಸೆಟ್ಟೇರಿದ ದಿನದಿಂದಲ್ಲೂ ಭಾರಿ ಸುದ್ದಿ ಮಾಡಿದ್ದ ಕಬ್ಜ ಈಗ ಸೆನ್ಸಾರ್ ಮುಗಿಸಿ ಪ್ರೇಕ್ಷಕರೆದುರು ಬರಲು ರೆಡಿಯಾಗುತ್ತಿದೆ.
ಇನ್ನು ಈ ಚಿತ್ರ ಇದೇ ತಿಂಗಳ 17 ರಂದು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಗೊಳ್ಳಲಿದ್ದು, ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಟ್ರೈಲರ್ ಹಾಗೂ ಹಾಡುಗಳನ್ನು ಒಂದರ ಹಿಂದೆ ಒಂದರಂತೆ ಬಿಡುಗಡೆ ಮಾಡಿರುವ ಚಿತ್ರತಂಡ ಸದ್ಯ ಬೇರೆ ರಾಜ್ಯಗಳಲ್ಲಿ ಪ್ರಚಾರವನ್ನೂ ಸಹ ಆರಂಭಿಸಿದೆ.
ಈ ನಡುವೆಯೇ ಚಿತ್ರದ ಸೆನ್ಸಾರ್ ಮುಕ್ತಾಯಗೊಂಡಿದ್ದು, ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಅನ್ನು ಸೆನ್ಸಾರ್ ಮಂಡಳಿ ನೀಡಿದೆ. ಇನ್ನು ಕಬ್ಜ ಚಿತ್ರದ ರನ್ ಟೈಮ್ ವಿದೇಶದಲ್ಲಿ 2 ಗಂಟೆ 14 ನಿಮಿಷಗಳ ಕಾಲ ಇರಲಿದ್ದು, ಭಾರತದಲ್ಲಿ 2 ಗಂಟೆ 16 ನಿಮಿಷಗಳು ಇರಲಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಚಿತ್ರದ ಇನಿಷಿಯಲ್ ಥಿಯೇಟರ್ ಲಿಸ್ಟ್ ಅನ್ನೂ ಸಹ ಚಿತ್ರತಂಡ ಬಿಡುಗಡೆಗೊಳಿಸಿದ್ದು, ಬೆಂಗಳೂರಿನ ನರ್ತಕಿ ಚಿತ್ರಮಂದಿರ ಚಿತ್ರಕ್ಕೆ ಮುಖ್ಯ ಚಿತ್ರಮಂದಿರವಾಗಿದೆ. ನರ್ತಕಿ ಜತೆಗೆ ಲಾಲ್ ಬಾಗ್ ಬಳಿಯ ಊರ್ವಶಿ, ಸ್ಯಾಂಕಿ ರಸ್ತೆಯ ಕಾವೇರಿ, ಸೇವಾ ನಗರದ ಮುಕುಂದ, ಸಂಜಯ್ ನಗರದ ವೈಭವ್, ತಾವರೆಕೆರೆಯ ಬಾಲಾಜಿ, ಮಲ್ಲೇಶ್ವರದ ಸವಿತ, ಉತ್ತರಹಳ್ಳಿಯ ಮುಕ್ತ ಎ2, ನಗರದ ಎಲ್ಲಾ ಪಿವಿಆರ್, ಎಲ್ಲಾ ಐನಾಕ್ಸ್, ಗೋಪಾಲನ್ ಹಾಗೂ ಎಲ್ಲಾ ಸಿನಿಪೊಲಿಸ್‌ಗಳು ಕಬ್ಜ ಚಿತ್ರದ ಇನಿಷಿಯಲ್ ಥಿಯೇಟರ್ ಲಿಸ್ಟ್‌ನಲ್ಲಿವೆ. ಉಳಿದಂತೆ ತುಮಕೂರು, ದೊಡ್ಡಬಳ್ಳಾಪುರ, ತಿಪಟೂರು, ಚನ್ನಪಟ್ಟಣ, ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಕಲ್ಬುರ್ಗಿ, ರಾಯಚೂರು, ಬೀದರ್, ಶಿವಮೊಗ್ಗ, ಕುಂದಾಪುರ, ಮಣಿಪಾಲ ಹಾಗೂ ಮಂಗಳೂರಿನ ಕೆಲ ಚಿತ್ರಮಂದಿರಗಳೂ ಸಹ ಈ ಇನಿಷಿಯಲ್ ಥಿಯೇಟರ್ ಲಿಸ್ಟ್‌ನಲ್ಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ