ಕಾಕಡ ಹೂವಿಗೆ ಹೊರ ರಾಜ್ಯಗಳಲ್ಲಿ ಬೇಡಿಕೆ

ತೋವಿನಕೆರೆ : 

      ಇಲ್ಲಿಗೆ ಸುತ್ತಮುತ್ತಲಿನ ಪ್ರದೇಶಗಳ ಕಾಕಡ ಹೂವು ಹೊರ ರಾಜ್ಯಗಳಿಗೆ ಸರಬರಾಜು ಆಗುವುದು ಮತ್ತೆ ಪ್ರಾರಂಭವಾಗಿ ಬೆಳೆಗಾರರು, ದಿನ ಕೂಲಿಯವರು, ದಲ್ಲಾಳಿಗಳು, ಮಧ್ಯವರ್ತಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.

     ಕಾಕಡ ಹೂವಿನ ಬೆಳೆ ಬರಗಾಲದ ಪ್ರದೇಶದಲ್ಲಿನ ಸಾವಿರಾರು ಜನರು ಸ್ವಾವಲಂಬನೆಯಿಂದ ಬದುಕುವಂತೆ ಮಾಡಿದೆ. ಕೇವಲ ನೂರು ಕಾಕಡ ಹೂವಿನ ಗಿಡಗಳು ಇದ್ದರೆ ವರ್ಷದಲ್ಲಿ 8 ತಿಂಗಳ ಕಾಲ ಕೃಷಿಕರು ನೆಮ್ಮದಿಯಾಗಿ ಬದುಕುತ್ತಿರುವ ಸಾವಿರಾರು ಉದಾಹರಣೆಗಳು ಸಿಗುತ್ತವೆ.

      ಹಬ್ಬಗಳ ಸಮಯದಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾದರೆ ಬಿಡುವಿನ ದಿನಗಳಲ್ಲಿ ಕೇಜಿಗೆ ಐದು ರೂ.ಗಳಿಗೂ ಕೇಳುವವರು ಇಲ್ಲದೇ ಬೆಳೆಗಾರಾರು ನಷ್ಟ ಅನುಭವಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಹೂವು ಬಿಡಿಸುವುದು, ಮಾಲೆ ಕಟ್ಟವ ಕೆಲಸವನ್ನು 8 ಕಾಲ ತಿಂಗಳು ನಿರಂತರವಾಗಿ ಮಾಡುತ್ತಾರೆ. ಕಾಕಡ ಹೂವು ಮುಗಿದ ನಂತರ ಮಲ್ಲಿಗೆ ಹೂವಿನ ಸೀಸನ್ ಪ್ರಾರಂಭವಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap