ಕಕ್ಕರಗೊಳ್ಳ ಪಿಡಿಒ ವಿರುದ್ಧ ಷಡ್ಯಂತ್ರ; ಆರೋಪ

ದಾವಣಗೆರೆ:

                 ಕಕ್ಕರಗೊಳ್ಳ ಪಿಡಿಒ ವಿರುದ್ಧ ಎಸಿಬಿ ದಾಳಿಯ ಹಿಂದೆ ಪೂರ್ವ ನಿಯೋಜಿತ ಸಂಚು ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಪಿಡಿಓ ಅಧಿಕಾರಿ ಗ್ರಾಮದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಕಕ್ಕರಗೊಳ್ಳ ಗ್ರಾಮ ಪಂಚಾಯಿತಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಕ್ಕರಗೊಳ್ಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಗದಿಗೆಪ್ಪ, ಕಳೆದ 1ವರ್ಷಗಳಿಂದ ಕಕ್ಕರಗೊಳ್ಳದಲ್ಲಿ ಸೇವೆ ಸಲ್ಲಿಸುತ್ತಿರುವ ವಿಜಯಗೌಡ ಅವರು ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಇದಲ್ಲದೆ ಇದಕ್ಕೂ ಮುನ್ನ ಪೆÇಲೀಸ್ ಇಲಾಖೆಯಲ್ಲಿ ಹನ್ನೆರಡು ವರ್ಷ ಸೇವೆ ಸಲ್ಲಿಸಿ ನಂತರ ಕಂದಾಯ ಇಲಾಖೆಯಲ್ಲಿ ಪಿಡಿಓ ಆಗಿ ಸೇರಿ 8ವರ್ಷಗಳ ಕಾಲ ಹೊನ್ನಾಳಿ ತಾಲೂಕಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ ಯರಗುಂಟೆಯ ರಿಯಲ್ ಎಸ್ಟೇಟ್ ಮಾಡುವ ವ್ಯಕ್ತಿಯೊಬ್ಬರು ಅವರ ವಿರುದ್ಧ ವಿನಾಕಾರಣ ಎಸಿಬಿಗೆ ದೂರು ನೀಡಿ ದಾಳಿ ನಡೆಸಿರುವುದು ಇದೊಂದು ಪೂರ್ವ ನಿಯೋಜಿತ ಸಂಚು ಎಂದು ಕಿಡಿಕಾರಿದರು.

ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಪದೇ ಪದೇ ಅಧಿಕಾರಿಗಳು ಬದಲಾವಣೆಯಾಗುತ್ತಿರುವುದು ಅಲ್ಲದೆ ಸರ್ವರ್ ತೊಂದರೆಯಿಂದಾಗಿ ಯರಗುಂಟೆ ಗ್ರಾಮದ ಹಾಲೇಶಪ್ಪರಿಗೆ ಎನ್ ಒಸಿ ನೀಡುವುದು ತಡವಾಗಿದೆ. ಇದನ್ನೇ ವಿಳಂಬ ಎಂದುಕೊಂಡು ಎಸಿಬಿಗೆ ದೂರು ನೀಡಿದ್ದಾರೆ ಅಲ್ಲದೆ ಬಲವಂತವಾಗಿ ಅವರ ಊಟದ ಬ್ಯಾಗ್ ನಲ್ಲಿ ಹಣ ಇಟ್ಟು ಅವರನ್ನು ದಾಳಿಯಲ್ಲಿ ಸಿಲುಕಿಸಲಾಗಿದೆ. ಇದೊಂದು ವ್ಯವಸ್ಥಿತ ಸಂಚು ಎಂದ ಅವರು, ಅವರೊಬ್ಬ ದಕ್ಷ ಅಧಿಕಾರಿಯಾಗಿದ್ದು ಈ ಕುರಿತಂತೆ ಜಿಲ್ಲಾಧಿಕಾರಿಗಳನ್ನು ಭೇಟಿ ನೀಡಿ ಗ್ರಾಮಸ್ಥರಿಂದ ಮನವಿ ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಹಂತೇಶ್ ಗೌಡ್ರು, ಪ್ರಸನ್ನಕುಮಾರ್, ಬಸವನಗೌಡ, ಜಯದೇವಪ್ಪ, ಗುರುಶಾಂತಪ್ಪ, ಸಾದಿಕ್, ಸುರೇಶ್, ಸಿದ್ದೇಶ್, ನವೀನ್ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap