ಕಳಪೆ ಕಾಮಗಾರಿ : ನೀರಿನಲ್ಲಿ ಹೋಮವಾಯ್ತ ಲಕ್ಷಾಂತರ ರೂಪಾಯಿ ರೋಡ್…!

ಕೊರಟಗೆರೆ :-

    ಕೊರಟಗೆರೆ ಪಟ್ಟಣದ ಅತಿ ಹಿಂದುಳಿದ ಜನರು ವಾಸವಿರುವ ಗಿರಿನಗರ ಪ್ರದೇಶದಲ್ಲಿ ಕೆ ಆರ್ ಐ ಡಿ ಎಲ್ (ಲ್ಯಾಂಡ್ ಆರ್ಮಿ) ಅಧೀನದಲ್ಲಿ ನಡೆಯುತ್ತಿರುವ ಲಕ್ಷಾಂತರ ರೂಪಾಯಿ ಅನುದಾನದ ರಸ್ತೆ ಕಾಮಗಾರಿ ಬಹಳ ಕಳಪೆಯಿಂದ ಕೂಡಿದೆ ಎಂದು ಪ್ರತಿಷ್ಠಿತ ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷರು ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಕಾಮಗಾರಿಯ ವಿರುದ್ಧ ಆರೋಪಗಳ ಸುರಿಮಳೆ ಹರಿಸಿದ್ದಾರೆ.

   ಕೊರಟಗೆರೆ ಪಟ್ಟಣದ ಗಿರಿನಗರದಲ್ಲಿ ಅಲ್ಪಸಂಖ್ಯಾತರ ಅನುದಾನದಲ್ಲಿ ಲಕ್ಷಾಂತರ ರೂಪಾಯಿ ಕಾಮಗಾರಿ ನಡೆಯುತ್ತಿದ್ದು ಅದರಲ್ಲಿ ರಸ್ತೆ ಕಾಮಗಾರಿ ಇತ್ತೀಚಿಗೆ ಪ್ರಾರಂಭವಾಗಿದ್ದು , ಪ್ರಾರಂಭ ಹಂತದಲ್ಲಿಯೇ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಪ್ರಾರಂಭದಲ್ಲಿ ಯಡವಿರುವುದು ಸ್ಥಳೀಯ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

  ಗಿರಿನಗರ ಹೇಳಿಕೇಳಿ ಕೊಳಚೆ ಪ್ರದೇಶ ಎಂದು ಗುರುತಿಸಲಾಗಿದ್ದು, ಸ್ಲಂ ಬೋರ್ಡ್ ನಿಂದ 10 ಹಲವು ಕಾಮಗಾರಿಗಳು ಇಲ್ಲಿ ನಡೆದಿದ್ದು, ಈಗ ಅಲ್ಪಸಂಖ್ಯಾತರ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ, ಕಾಟ ಆಚಾರಕ್ಕೆ ಕಾಮಗಾರಿ ನಡೆದರೆ ಎರಡೇ ದಿನಕ್ಕೆ ದೋಸ್ತಿಗಳು ಗುಂಡಿ ಬೀಳಲಿವೆ, ಕಾಮಗಾರಿ ಪ್ರಾರಂಭ ಹಂತದಲ್ಲಿ ಸಮರ್ಪಕವಾಗಿ ರಸ್ತೆಯ ಎರಡು ಬದಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳ ಜೊತೆಗೆ ಈ ಹಿಂದೆ ಇದ್ದಂತಹ ಡಾಂಬರೀಕರಣದ ವೆಸ್ಟೇಜ್ ಅನ್ನ ಅಲ್ಲಿಯೇ ಮುಚ್ಚಿ ಕಾಮಗಾರಿ ನಡೆಯುತ್ತಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿ, ಕಾಮಗಾರಿ ಸಮರ್ಪಕವಾಗಿ ಗುಣಮಟ್ಟದಿಂದ ನಡೆಯಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

   ಪಟ್ಟಣದಲ್ಲಿ ಅಲ್ಪಸಂಖ್ಯಾತರ ಅನುದಾನದಿಂದ ನಡೆಯುತ್ತಿರುವಂತಹ ಕಾಮಗಾರಿ ಸ್ಥಳ ಈ ಹಿಂದೆ ಪಟ್ಟಣ ಪಂಚಾಯಿತಿ ಅನುದಾನದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, 2-3 ವರ್ಷದಲ್ಲಿ ರಸ್ತೆ ಹಾಳಾಗಿ ಗುಂಡಿ ಬೀಳುತ್ತವೆ ಎಂದರೆ ಈ ಹಿಂದಿನ ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸುವಂತಿದ್ದು, ಈ ಹಿಂದಿನ ಹಳೆಯ ಕಾಮಗಾರಿಯನ್ನ ಕೀಳಲು ಪಟ್ಟಣ ಪಂಚಾಯಿತಿ ಮೂರ್ನಾಲ್ಕು ವರ್ಷ ಗಳಿಗೆ ಏನ್ ಓ ಸಿ ನೀಡುತ್ತದೆಯೇ ? ಹಾಗಾದರೆ ಪಟ್ಟಣ ಪಂಚಾಯಿತಿಯಿಂದ ನಡೆಯುವಂತ ಕಾಮಗಾರಿಗಳು ಗುಣಮಟ್ಟದಿಂದ ಕೂಡಿವೆ ಎಂಬುವ ಅನುಮಾನ ಹಲವು ಸ್ಥಳೀಯ ನಾಗರೀಕರಿಂದ ಆರೋಪ ಕೇಳಿ ಬಂದಿದ್ದು, ಲ್ಯಾಂಡ್ ಆರ್ಮಿ ವತಿಯಿಂದ ನಡೆಯುತ್ತಿರುವ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಎಂದು ಒತ್ತಾಯಿಸಿದ್ದಾರೆ.

ಕಾಮಗಾರಿಯ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಿ

   ಸರ್ಕಾರದಿಂದ ಬಿಡುಗಡೆಗೊಳ್ಳುವ ಯಾವುದೇ ಕಾಮಗಾರಿಗಾಗಲಿ ಕಾಮಗಾರಿಯ ಮೊತ್ತ ಸೇರಿದಂತೆ ಪೂರ್ಣ ವಿವರಗಳು ನಾಮಫಲಕವನ್ನ ನೆಟ್ಟು ನಂತರ ಕಾಮಗಾರಿ ನಡೆಸುವುದು ಸಾಮಾನ್ಯವಾಗಿದ್ದು, ಆದರೆ ಇತ್ತೀಚಿಗೆ ಯಾವುದೇ ಕಾಮಗಾರಿಗಳಲ್ಲಿಯೂ ಕಾಮಗಾರಿಯ ಪೂರ್ಣ ವಿವರ ನೀಡುವಂತಹ ನಾಮಪಲಕವನ್ನ ನಡೆದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದ್ದು, ಕಾಮಗಾರಿಯ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲದೆ , ಕಾಮಗಾರಿಯ ವಿವರ, ಅನುದಾನದ ಮೊತ್ತ ಯಾವುದು ಸ್ಪಷ್ಟತೆ ಇಲ್ಲದಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಸ್ಥಳೀಯ ನಾಗರೀಕರಲ್ಲಿ ಅನುಮಾನ ಬಿಡುವುದು ಸಹಜವಾಗಿದ್ದು, ಪ್ರತಿ ಕಾಮಗಾರಿಯಲ್ಲಿಯೂ ಮೊದಲು ಕಾಮಗಾರಿಯ ಪೂರ್ಣ ವಿವರ ನಾಮಪಲಕವನ್ನ ನೆಡಬೇಕು ಎಂದು ಒತ್ತಾಯಿಸಿದ್ದಾರೆ.

ಕೆ ಆರ್ ಐ ಡಿ ಎಲ್ ಮೇಲಿರುವ ನಂಬಿಕೆಉಸಿ

   ಕೊರಟಗೆರೆ ತಾಲೂಕು ವ್ಯಾಪ್ತಿಯಲ್ಲಿ ಕೆ ಆರ್ ಐ ಡಿ ಎಲ್ ಗೆ ಹಲವು ಕಾಮಗಾರಿಗಳ ಜವಾಬ್ದಾರಿ ನೀಡಲಾಗಿದ್ದು, ಶಾಲಾ-ಕಾಲೇಜು ಕಟ್ಟಡ, ಸಿ.ಸಿ ರಸ್ತೆ, ಚರಂಡಿ ಹೀಗೆ ನಾನಾ ಕಾಮಗಾರಿಗೆ ಹಣ ಬಿಡುಗಡೆಯಾಗಿದೆ. ಕೆಲಸ ಬೇಗ ಆಗಲಿ ಎಂಬ ಕಾರಣಕ್ಕೆ ಭೂಸೇನಾ ನಿಗಮದವರಿಗೆ ಕಾಮಗಾರಿ ಗುತ್ತಿಗೆ ನೀಡಿದರೆ, ಕೆಲವೆಡೆ ಅರೆಬರೆ ಕೆಲಸ ನಡೆಸಿ ಕೈಬಿಟ್ಟು ಅನುದಾನದ ಕೊರತೆಯ ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ,ನಾನಾ ಕಾಮಗಾರಿಗಳ ಹಣ ದುರ್ಬಳಕೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಲ್ಯಾಂಡ್‌ ಅರ್ಮಿ ಅಧಿಕಾರಿಗಳ ಮೇಲೆ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿರುವುದು ಸಹ ಕಂಡು ಬರುತ್ತಿದೆ.

Recent Articles

spot_img

Related Stories

Share via
Copy link
Powered by Social Snap