ಕನ್ನಡ ವರ್ಷನ್ನಿಂದ ಇಷ್ಟೊಂದು ಕಡಿಮೆ ಗಳಿಕೆ ಆಗಲು ಪ್ರಮುಖ ಕಾರಣವೂ ಇದೆ. ಕರ್ನಾಟಕದಲ್ಲಿ ಈ ಚಿತ್ರದ ಹಂಚಿಕೆ ಪಡೆದಿರುವ ಕೆವಿಎನ್ ಪ್ರೊಡಕ್ಷನ್ನವರು ಕನ್ನಡಕ್ಕೆ ಕೆಲವೇ ಕೆಲವು ಶೋಗಳನ್ನು ನೀಡಿದ್ದಾರೆ. ಇದರ ಜೊತೆಗೆ ಕನ್ನಡ ವರ್ಷನ್ಗೆ ಯಾವುದೇ 3ಡಿ ಆಯ್ಕೆ ನೀಡಿಲ್ಲ. ಇದರಿಂದ ಸಹಜವಾಗಿಯೇ ಕನ್ನಡ ವರ್ಷನ್ ಗಳಿಕೆಯಲ್ಲಿ ಇಳಿಕೆ ಕಂಡಿದೆ.
ಭಾರತಾದ್ಯಂತ ಈ ಚಿತ್ರ 371 ಕೋಟಿ ರೂಪಾಯಿ ಬಾಚಿಕೊಂಡಿದೆ. ವಿಶ್ವದ ಲೆಕ್ಕಾಚಾರ ನೋಡಿದರೆ ಈ ಸಿನಿಮಾದ ಗಳಿಕೆ 650 ಕೋಟಿ ರೂಪಾಯಿ ದಾಟಿದೆ. ಇದು ಚಿತ್ರ ತಂಡದ ಖುಷಿ ಹೆಚ್ಚಿಸಿದೆ. ಈ ವರ್ಷ ರಿಲೀಸ್ ಆಗಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಈ ಸಿನಿಮಾ ಇನ್ನೂ ಕೆಲವು ವಾರ ಭರ್ಜರಿ ಗಳಿಕೆ ಮಾಡುವ ನಿರೀಕ್ಷೆ ಇದೆ.
‘ ಕಲ್ಕಿ 2898 ಎಡಿ’ ಚಿತ್ರಕ್ಕೆ ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಅಶ್ವಿನಿ ದತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಬಜೆಟ್ 600 ಕೋಟಿ ರೂಪಾಯಿ ಮೀರಿದೆ. ಹೀಗಾಗಿ ಸಿನಿಮಾಗೆ ದೊಡ್ಡ ಮೊತ್ತದ ಗಳಿಕೆ ಆಗಲೇಬೇಕಾದ ಅನಿವಾರ್ಯತೆ ಇತ್ತು. ಈ ಅನಿವಾರ್ಯತೆಯನ್ನು ಸಿನಿಮಾ ನೀಗಿಸಿದೆ. ಈ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮೊದಲಾದವರು ನಟಿಸಿದ್ದಾರೆ. ಅನೇಕರು ಅತಿಥಿ ಪಾತ್ರ ಮಾಡಿದ್ದಾರೆ.