ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರುಪಾಲು

ಬೆಳಗಾವಿ

    ಜಿಲ್ಲೆಯಲ್ಲಿ ಘೋರ ಘಟನೆ ನಡೆದಿದೆ. ಕಾಲುವೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟಿರುವುದು  ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರು ಬಳಿ ನಡೆದಿದೆ. ಬಸವರಾಜ ಸೋಮಣ್ಣವರ್  ಹಾಗೂ ಹನುಮಂತ  ಮೃತ ಬಾಲಕರು. ನೀರಿನ ರಭಸ ಹೆಚ್ಚಾಗಿ ಕಾಲುವೆಯಲ್ಲಿ ಬಾಲಕರು ಕೊಚ್ಚಿ ಹೋಗಿದ್ದಾರೆ.ಸದ್ಯ ಇಬ್ಬರು ಬಾಲಕರ ಶವಗಳನ್ನು ಸ್ಥಳೀಯರು ಹಾಗೂ ಪೊಲೀಸರು ಹೊರಗಡೆ ತೆಗೆದಿದ್ದು, ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Recent Articles

spot_img

Related Stories

Share via
Copy link